ಸೌಜನ್ಯ ನ್ಯಾಯಾಕ್ಕಾಗಿ ಹೋರಾಟ ನಡೆಸುತ್ತಿರುವ ಗಿರೀಶ್ ಮಟ್ಟಣ್ಣರವರ ಮೇಲೆ ಧರ್ಮಸ್ಥಳ ಪರಿಸರದಲ್ಲಿ ಹಲ್ಲೆ ಯತ್ನವನ್ನು ಸುಳ್ಯ ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಸುಳ್ಯ ತಾಲೂಕು ಸಂಯೋಜಕ ಯನ್.ಟಿ. ವಸಂತ್ ಖಂಡಿಸಿದ್ದಾರೆ.ಸೌಜನ್ಯ ಅತ್ಯಾಚಾರ ಕೊಲೆಯಾಗಿ 12 ವರ್ಷ ಕಳೆದರೂ ನಮಗೆ ನ್ಯಾಯ ದೊರಕಲಿಲ್ಲ, ಈ ನಿಟ್ಟಿನಲ್ಲಿ ಮಹೇಶ್ ತಿಮರೋಡಿ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿದೆ. ಮೊನ್ನೆ ದಿನ ಹೋರಾಟಗಾರ ಗಿರೀಶ್ ಮಟ್ಟನ್ ರವರಿಗೆ ಧರ್ಮಸ್ಥಳ ಪರಿಸರದಲ್ಲಿ ಕೆಲ ವ್ಯಕ್ತಿಗಳು ಹಲ್ಲೆ ಮಾಡಲು ಯತ್ನಿಸಿದ್ದು ನಾವು ಸಹಿಸುವುದಿಲ್ಲ, ನಮ್ಮ ಹುಡುಗರು ಕೈ ಕಟ್ಟಿ ಕುಳಿತಿಲ್ಲ, ನಮ್ಮ ಹೋರಾಟಗಾರರಿಗೆ ಅನ್ಯಾಯ ಆದರೆ ಧರ್ಮಸ್ಥಳ ದ್ವಾರದ ಎದುರು ನ್ಯಾಯಕ್ಕಾಗಿ ಧರಣಿ ಕೂರಲು ನಾವು ಹಿಂಜರಿಕೆ ಮಾಡುವುದಿಲ್ಲ, ನಾವು ಅಣ್ಣಪ್ಪ, ಮಂಜುನಾಥ ಸ್ವಾಮಿ ದೇವರ ಭಕ್ತರು, ಈ ರೀತಿ ದಬ್ಬಾಳಿಕೆ ಸಹಿಸಲ್ಲ ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಹೋರಾಟಗಾರರಿಗೆ ರಕ್ಷಣೆ ನೀಡಬೇಕೆಂದು ಯನ್.ಟಿ. ವಸಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Sunday
- November 24th, 2024