ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಡಿ.14 ರಂದು ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದಲ್ಲಿರುವ ಸಂಘದ ಕಛೇರಿಯಲ್ಲಿ ನಡೆಯಿತು. ಆಡಳಿತ ಮಂಡಳಿಯ ಸಮಿತಿಯ ಸದಸ್ಯರಾದ ಜಗದೀಶ್ ಎ. ಹೆಚ್. ಇವರು ಪ್ರಾರ್ಥನೆಗೈದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ| ಕೆ. ಎ ಚಿದಾನಂದ ಇವರು ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ. ಇವರು ಸಂಸ್ಥೆಯ 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರವನ್ನು ಸಂಘದ ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ ಎ. ಜಿ. ಮಂಡಿಸಿದರು ಹಾಗೂ 2023-24ನೇ ಸಾಲಿನ ಆಯವ್ಯಯ ಪಟ್ಟಿಯನ್ನು ಕಾರ್ಯದರ್ಶಿಯವರಾದ ಕೆ. ವಿ. ಹೇಮನಾಥರವರು ಸಭೆಯ ಮುಂದಿಟ್ಟರು. ವಾರ್ಷಿಕ ವರದಿ, ವಾರ್ಷಿಕ ಲೆಕ್ಕ ಪತ್ರ ಹಾಗೂ ಆಯವ್ಯಯ ಪಟ್ಟಿಯನ್ನು ಸಭೆಯ ಮುಂದಿಟ್ಟು ಅವುಗಳನ್ನು ಅನುಮೋದಿಸಲಾಯಿತು.
ತದನಂತರ 2023-24 ನೇ ಸಾಲಿನ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಿ ಸರ್ವಾನುಮತದಿಂದ ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಡಾ| ಕೆ.ವಿ ಚಿದಾನಂದ, ಉಪಾಧ್ಯಕ್ಷರಾಗಿ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕೆ. ಸಿ. ಕಾರ್ಯದರ್ಶಿಗಳಾಗಿ ಕೆ. ವಿ. ಹೇಮನಾಥ್ ಹಾಗೂ ಡಾ| ಐಶ್ವರ್ಯ ಕೆ. ಸಿ. ಕೋಶಾಧಿಕಾರಿಯಾಗಿ ಡಾ। ಗೌತಮ್ ಗೌಡ ಎ. ಜಿ. ಹಾಗೂ ಸದಸ್ಯರುಗಳಾಗಿ ಜಗದೀಶ್ ಎ. ಹೆಚ್., ಶ್ರೀಮತಿ. ಮೀನಾಕ್ಷಿ ಕೆ. ಹೆಚ್ ಹಾಗೂ ಧನಂಜಯ ಎಂ. ಆಯ್ಕೆಯಾದರು.
ಸಭೆಯಲ್ಲಿ ಮುಂದಿನ ಸಾಲಿನ ಲೆಕ್ಕ ಪರಿಶೋಧಕರಾಗಿ ರಾಮುಲು ನಾಯ್ಡು ಮತ್ತು ಕಂಪೆನಿ ಇವರನ್ನು ನೇಮಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಡಾ| ಕೆ. ವಿ ಚಿದಾನಂದ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಾ। ಐಶ್ವರ್ಯ ಕೆ. ಸಿ. ಇವರು ಧನ್ಯವಾದಗೈದರು.
- Friday
- November 1st, 2024