ಜನರ ಆರ್ಥಿಕ ವ್ಯವಸ್ಥೆ ಸುಭದ್ರ ಸ್ಥಿತಿಯಲ್ಲಿರಬೇಕಾದರೆ ಕೃಷಿಯೊಂದಿಗೆ ಉಪ ಕಸುಬುಗಳು ಇಂದಿನ ಅಗತ್ಯವಾಗಿದೆ ಎಂದು ಎಂದು ಸುಳ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹೇಳಿದರು.
ಅವರು ಸುಳ್ಯ ಕೃಷಿ ಇಲಾಖೆಯಲ್ಲಿ ನಡೆದ ೨೦೨೩-೨೪ನೇ ಸಾಲಿನ ಕೃಷಿ ತಂತ್ರಜ್ಞಾನ ನಿರ್ಮಾಣ ಸಂಸ್ಥೆ ಎ.ಟಿ.ಎಂ.ಎ ಯೋಜನೆಯಡಿ ಉಜಿರೆಯ ಕರಿಗಂಧ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ನಡೆದ ಜಿಲ್ಲೆಯೊಳಗಿನ ರೈತರ ತರಬೇತಿ ಕಾರ್ಯಕ್ರಮ ಅಣಬೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಣಬೆ ಕೃಷಿಯ ಬಗ್ಗೆ ತರಬೇತಿ ನೀಡಿದ ಸುಲೈಮಾನ್ ಬೆಳಾಲು ಮಾತನಾಡಿ ಅಣಬೆ ಒಂದು ಔಷಧಿಯ ಗುಣವುಳ್ಳ ಪೌಷ್ಠಿಕ ಆಹಾರ. ಅದರೊಂದಿಗೆ ಕೃಷಿಯೊಂದಿಗೆ ಉಪ ಬೆಳೆಯಾಗಿ ಬೆಳೆಸಿ ಆರ್ಥಿಕವಾಗಿ ಸದೃಢವಾಗಬಹುದು ಎಂದು ಹೇಳಿದರು.
ಎನ್.ಆರ್.ಎಲ್.ಎಂ ನ ತಾಲೂಕು ವ್ಯವಸ್ಥಾಪಕಿ ಶ್ವೇತಾ, ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಮೋಹನ್ ನಂಗಾರು ಮಾತನಾಡಿದರು. ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ನಂದಿತಾ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೪೦ ಮಂದಿ ರೈತರು ತರಬೇತಿಯಲ್ಲಿ ಭಾಗವಹಿಸಿದರು. ಬಳಿಕ ಕರಿಗಂಧ ಸೇವಾ ಟ್ರಸ್ಟ್ ವತಿಯಿಂದ ಅಣಬೆ ಬ್ಯಾಗ್ ಮತ್ತು ಅಣಬೆ ಬೀಜಗಳನ್ನು ವಿತರಿಸಲಾಯಿತು.