ಸೌಜನ್ಯ ಹೋರಾಟ ಸಮಿತಿ ವತಿಯಿಂದ ಗುತ್ತಿಗಾರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಗೆ ಮಹೇಶ್ ಶೆಟ್ಟಿ ತಿಮರೋಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಿರೀಶ್ ಮಟ್ಟಣ್ಣನವರ್, ತಮಣ್ಣ ಶೆಟ್ಟಿ, ಪ್ರಸನ್ನ ರವಿ, ನ್ಯಾಯವಾದಿ ಮೋಹಿತ್ ಕುಮಾರ್, ಸುರೇಶ್ ಶೆಟ್ಟಿ ಯೆಯ್ಯಾಡಿ, ಡಿ.ಬಿ.ಬಾಲಕೃಷ್ಣ, ಎನ್.ಟಿ.ವಸಂತ್, ಚಂದ್ರ ಕೋಲ್ಚಾರ್, ನೀತಿ ತಂಡದ ಜಯಂತ ಪೂಜಾರಿ, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದಾರೆ.
ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಪಾಲ್ತಾಡು ಪ್ರಾರ್ಥಿಸಿದರು.ಕಿರಣ್ ಬುಡ್ಲೆಗುತ್ತು ಸ್ವಾಗತಿಸಿದರು.