“ಶಿಕ್ಷಣವೇ ಸುಳ್ಯದ ಅಭಿವೃದ್ಧಿಗೆ ಬೇಕಾದ ಪ್ರಮುಖ ಮೂಲಸೌಕರ್ಯ ಎಂಬುದನ್ನು ಅರಿತ ಡಾ. ಕುರುಂಜಿ ಅವರ ದೂರದೃಷ್ಟಿ ಮತ್ತು ಕೊಡುಗೆಗಳು ಅಪಾರ, ಈ ನೆಲದ ದಣಿವರಿಯದ ಧೀಮಂತ ವ್ಯಕ್ತಿಯಾದ ಇವರು ನಮ್ಮೆಲ್ಲರ ಪ್ರಾತಃ ಸ್ಮರಣೀಯರು ” ಎಂದು ಸಂಪನ್ಮೂಲ ವ್ಯಕ್ತಿಗಳಾಗಿದ ಶ್ರೀ ಕೆ.ಆರ್. ಗೋಪಾಲಕೃಷ್ಣ ಇವರು ತಿಳಿಸಿದರು.
ಇವರು ದಿನಾಂಕ 16-12.2023 ರಂದು ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ಡಾ. ಕಾರಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಸವಿನೆನಪಿಗಾಗಿ ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ನಡೆದ ಕೆ. ವಿ. ಜಿ. ಸಾಧನೆ- ಸಂಸ್ಕರಣೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಚಳ್ಳ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಶೈಲೇಶ್ ಅಂಬೆಕಲ್ಲು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್. ಡಿ.ಎಂ.ಸಿ.ಸದಸ್ಯರಾದ ಗೋವಿಂದ ಪಿ ಪಿ, ಲೀಲಾಧರ ಗುಡ್ಡೆ ಬಟ್ಟಕಜೆ, ಶ್ರೀಮತಿ ಪ್ರೇಮಲತಾ ರೈ ಸಂಕೇಶ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ನಡೆಯಿತು. ಶಿಕ್ಷಕರಾದ ಮುರಳೀಧರ ಪುನುಕುಟ್ಟಿ
ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ ಸ್ವಾಗತಿಸಿ, ಶಿಕ್ಷಕರಾದ ಸುಂದರ್ ಕೆ ಇವರು ಧನ್ಯವಾದ ಅರ್ಪಿಸಿದರು. ಶಿಕ್ಷಕರಾದ ವಸಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಪೋಷಕರು,ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Sunday
- November 24th, 2024