Ad Widget

ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿ ಸಂತೃಪ್ತಿ ರೈ ಗೆ ಬೇಕಿದೆ ದಾನಿಗಳ ಸಹಾಯಹಸ್ತ


. . . . . . . . .

ಬಳ್ಪ ಸಮೀಪದ ಬೇಂಗನಡ್ಕ ವಿಠಲ ನಿವಾಸದ ಸಂತೋಷ್ ಕುಮಾರ್ ಹಾಗೂ ಅನುಷಾ ರೈ ದಂಪತಿಯ 10 ವರ್ಷದ ಪುತ್ರಿ ಸಂತೃಪ್ತಿ ರೈ ಕಳೆದ 3 ತಿಂಗಳಿನಿಂದ ರಕ್ತಕ್ಕೆ ಸಂಬಂಧಿಸಿದ(High Risk Acute Myeloid Leukaemia) ತೀವ್ರ ಕಾಯಿಲೆಯಿಂದ ಬಳಲುತ್ತಿದ್ದು, ಎಲ್ಲಾ ಮಕ್ಕಳಂತೆ ತನ್ನ ಸಹಪಾಠಿಗಳೊಂದಿಗೆ ಆಡಿ ನಲಿಯಬೇಕಿದ್ದ ಬಾಲಕಿ ಇದೀಗ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಸುಮಾರು 2 ತಿಂಗಳಿನಿಂದ ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಯ ಚಿಕಿತ್ಸೆಗೆ ಈಗಾಗಲೇ ಸುಮಾರು 5 ಲಕ್ಷದವರೆಗೆ ಖರ್ಚಾಗಿದ್ದು, ಈ ಕಾಯಿಲೆಗೆ Bone Marrow Transplant ಚಿಕಿತ್ಸೆಯನ್ನು ಅವಶ್ಯಕವಾಗಿ ಮಾಡಲೇಬೇಕೆಂದು, ಈ ಚಿಕಿತ್ಸೆಗೆ ಸುಮಾರು 25 ಲಕ್ಷದವರೆಗೆ ವೆಚ್ಚ ತಗಲಬಹುದೆಂದು ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ| ರಾಜೇಶ್ ಕೃಷ್ಣ(Haemato Oncologist) ರವರು ತಿಳಿಸಿರುತ್ತಾರೆ. ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಸಂತೃಪ್ತಿಯ ಹೆತ್ತವರು ಆಸ್ಪತ್ರೆ ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿದ್ದು, ದಾನಿಗಳ ಹಾಗೂ ಸಂಘಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ…
ಪುಟ್ಟ ಬಾಲಕಿ ಸಂತೃಪ್ತಿಯ ಚಿಕಿತ್ಸೆಗೆ ಸಹಾಯ ಮಾಡಲು ಇಚ್ಛಿಸುವವರು
Name : Anusha Rai M
A/c : 4031101000286
IFSC : CNRB0004031
Mobile Number : 9901316493 ಇದಕ್ಕೆ ಜಮೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ.

. . . . . . .

(ವರದಿ : ಉಲ್ಲಾಸ್ ಕಜ್ಜೋಡಿ)


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading