Ad Widget

ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಚತೆಗಾಗಿ ಕಸದ ತೊಟ್ಟಿ ಅಳವಡಿಕೆ


ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸ್ವಚ್ಛತಾ ಸಮಿತಿ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟಿ ಇಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾರವರು ಸ್ವಚ್ಛತೆ ಬಗ್ಗೆ ತಿಳಿಸಿ ಎಲ್ಲರ ಸಹಕಾರ ಕೋರಿದರು. ಕಾರ್ಯಕ್ರಮವನ್ನು ನವಮಿ ಸ್ಟೋರ್ ಬಳಿ ಕಸದ ತೊಟ್ಟಿ ಅಳವಡಿಸುವ ಮೂಲಕ ಸ್ಥಳೀಯ ಡಾಕ್ಟರ್ ಶ್ಯಾಮ್ ಪ್ರಸಾದ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ವಿಮಲಾ ಪ್ರಸಾದ್ ವರ್ತಕರ ಸಂಘದ ಕಾರ್ಯದರ್ಶಿ ರಝಕ್ ಸೂಪರ್, ಕಿಪಾಯತುಲ್ಲ ಭಾರತ್, ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್, ಬಯೋ ಬ್ಲಡ್ ಕೇರ್ ಸೆಂಟರ್ ಮನೋಜ್, ಉದಯಕುಮಾರ್ ಪೂಜಾ ಫೈನಾನ್ಸ್, ಅಬೂಬಕ್ಕರ್ ಎಂ. ಸಿ. ಮೊದಲದವರು ಉಪಸ್ಥಿತರಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸರ್ವರನ್ನು ಸ್ವಾಗತಿಸಿದರು. ಈಗಾಗಲೇ ಆಯ್ದ ಸ್ಥಳಗಳಲ್ಲಿ ತೊಟ್ಟಿ ಇಡಲಾಗಿದ್ದು ಎಲ್ಲಾ ಅಂಗಡಿಗಳಿಗೆ ಒಣ ಕಸ ಚೀಲ ನೀಡಲಾಗಿದ್ದು, ಹಸಿ ಕಸ ಸಂಗ್ರಹಣೆ ಮಾಡಲು ಎಲ್ಲಾ ಅಂಗಡಿಗೂ ಬಕೆಟ್ ನೀಡಲಾಗುವುದು ಎಂದರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading