Ad Widget

ನಾಪೊಕ್ಲು‌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ಆಯ್ಕೆ

ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ನೇಮಕಗೊಂಡಿದ್ದಾರೆ.

. . . . . . . . .

ಪೆರಾಜೆ ವಲಯದ ಪುತ್ಯ ಪೆರಾಜೆ ಬೂತ್ ಮಟ್ಟದ ಸಭೆ ಡಿ.10ರಂದು ನಡೆಯಿತು.
ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೆ .ಎ, ಮುಖಂಡರಾದ ಟಿ .ಪಿ ರಮೇಶ ಮಡಿಕೇರಿ,ಬೇಕಲ್ ರಮಾನಾಥ್ ಕರಿಕೆ, ಶೌಕತ್ ಅಲಿ ಕುಂಜಿಲ, ರಾಜೇಶ್ವರಿ ಕೊಯಿನಾಡು, ಚುನಾವಣಾ ಉಸ್ತುವಾರಿ ರಮೇಶ್ ಎ .ಪಿ ಬಾಳಲೆ, ವಾರ್ಡ್ ಸದಸ್ಯ ಸುರೇಶ್ ಪೆರುಮಂಡ,ಬ್ಲಾಕ್ ಕಾರ್ಯದರ್ಶಿ ಬಶೀರ್ ಚೆರಂಬಾಣೆ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಪೆರುಮಂಡರನ್ನು ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದಾಗಿ ಬ್ಲಾಕ್ ಅಧ್ಯಕ್ಷರು ಘೋಷಣೆ ಮಾಡಿದರು.

. . . . . . .

ಈ ಸಂದರ್ಭ ಹರಿಪ್ರಸಾದ್,ತುಳಸಿ ಗಾಂಧಿಪ್ರಸಾದ್,ಲೀಲಾವತಿ, ಬಿಂದು,ಚಿದಾನಂದ, ಪೂವಪ್ಪ ಮಾಸ್ತರ್, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರುಗಳು ಸಭೆಯಲ್ಲಿ ಹಾಜರಿದ್ದು ಮುಂದಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಗೆ ಬೇಕಾದ ಪೂರ್ವ ತಯಾರಿ ಬಗ್ಗೆ ಕಾರ್ಯಪ್ರವರ್ತರಾಗಲು ಚರ್ಚಿಸಲಾಯಿತು. ನ್ಯಾಯವಾದಿ ಚಂದನ ಸ್ವಾಗತಿಸಿ, ಜಯರಾಮ್ ವಂದಿಸಿದರು.ಪೆರಾಜೆ ಭಾಗದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮತ್ತು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ ಮನು ಪೆರುಮುಂಡ ಅವರಿಗೆ ನಾಪೋಕ್ಲು ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯ ನೇಮಕಾತಿ ಪತ್ರವನ್ನು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ .ಎ ಇಷ್ಮಾಯಿಲ್ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಮುಖರು ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading