Ad Widget

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ ಡಿ.16 ರಂದು ತಾಲೂಕಿನ 26 ಶಾಲೆಗಳಲ್ಲಿ ಏಕಕಾಲದಲ್ಲಿ ಕೆ.ವಿ.ಜಿ. ಸಾಧನೆ – ಸಂಸ್ಮರಣೆ



ಆಧುನಿಕ ಸುಳ್ಯದ ಅಮರ ಶಿಲ್ಪಿ ಡಾ| ಕುರುಂಜಿ ವೆಂಕಟ್ರಮಣ ಗೌಡರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಶಾಲಾ ಕಾಲೇಜುಗಳಲ್ಲಿ ವಿನೂತನ ಕಾರ್ಯಕ್ರಮ ಕೆ.ವಿ.ಜಿ. ಸಾಧನೆ – ಸಂಸ್ಮರಣೆ ಹಾಗೂ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಹಾಗೂ ಭಾಷಣ ಸ್ಪರ್ಧೆಯು ಡಿ.೧೬ರಂದು ನಡೆಯಲಿದೆ. ತಾಲೂಕಿನಲ್ಲಿ ೨೬ ಶಾಲೆಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯುವುದು ಎಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ. ಡಿ.9ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.
ಡಿ.16ರಂದು ಕೆ.ವಿ.ಜಿ. ಸಾಧನೆ – ಸಂಸ್ಮರಣೆಯ ಕುರಿತು ೨೬ ಮಂದಿ ಸಂಪನ್ಮೂಲ ವ್ಯಕ್ತಿಗಳಿಂದ ಶಾಲೆಗಳಲ್ಲಿ ಕಾರ್ಯಕ್ರಮ ನಡೆಯುವುದು.
ಸುಳ್ಯ ಎನ್ನೆಂಸಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ| ಜ್ಞಾನೇಶ್ ಎನ್.ಎ., ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೊ. ಬಾಲಚಂದ್ರ ಗೌಡ ಎಂ, ಪೆರುವಾಜೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ| ಪೂವಪ್ಪ ಕಣಿಯೂರು, ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಡಾ| ಪ್ರಭಾಕರ ಶಿಶಿಲ, ಸರಕಾರಿ ಪ್ರೌಢಶಾಲೆ ಎಣ್ಮೂರಿನಲ್ಲಿ ಪ್ರದೀಪ್ ಕುಮಾರ್ ಪನ್ನೆ, ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ಲೋಕನಾಥ ಅಮೆಚೂರು, ಆರ್.ಎಂ.ಎಸ್.ಎ. ಪ್ರೌಢಶಾಲೆ ಸಂಪಾಜೆಯಲ್ಲಿ ಚಿದಾನಂದ ಯು.ಎಸ್., ಎನ್ನೆಂಪಿಯುಸಿ ಅರಂತೋಡಿನಲ್ಲಿ ಕೆ.ಆರ್. ಗಂಗಾಧರ್, ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ಕಿಶೋರ್ ಕುಮಾರ್ ಕಿರ್ಲಾಯ, ಸರಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಶ್ರೀಮತಿ ಮಧುರಾ ಎಂ.ಆರ್., ಶಾರದ ಪ.ಪೂ. ಕಾಲೇಜು ಸುಳ್ಯದಲ್ಲಿ ಶ್ರೀಮತಿ ಸ್ವರ್ಣಕಲಾ, ಸರಕಾರಿ ಪ್ರೌಢಶಾಲೆ ಆಲೆಟ್ಟಿಯಲ್ಲಿ ಶ್ರೀಮತಿ ಜ್ಯೋತ್ಸ್ನಾ ದಿನೇಶ್, ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿನಲ್ಲಿ ಶ್ರೀಮತಿ ರೇಷ್ಮಾ ದೇವರಗುಂಡ, ಸರಕಾರಿ ಪ್ರೌಢಶಾಲೆ ಐವರ್ನಾಡಿನಲ್ಲಿ ರಾಮಚಂದ್ರ ಪಿ, ವಿನಯ ಕುಮಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಪುರುಷೋತ್ತಮ ಕಿರ್ಲಾಯ, ಸರಕಾರಿ ಪ್ರೌಢಶಾಲೆ ದುಗಲಡ್ಕದಲ್ಲಿ ದಿನೇಶ್ ಮಡಪ್ಪಾಡಿ, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೊಡ್ಡಣ್ಣ ಬರೆಮೇಲು, ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ಕೆ.ಆರ್. ಗೋಪಾಲಕೃಷ್ಣ, ಸರಕಾರಿ ಪ.ಪೂ. ಕಾಲೇಜು ಗುತ್ತಿಗಾರಿನಲ್ಲಿ ವೆಂಕಪ್ಪ ಗೌಡ ಕೇನಾಜೆ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಡಾ| ಸನತ್ ಕುಮಾರ್ ಡಿ.ಜಿ., ಸ್ನೇಹ ಪ್ರೌಢಶಾಲೆ ಸುಳ್ಯದಲ್ಲಿ ಪ್ರಸನ್ನ ನಿಡ್ಯಮಲೆ, ಗ್ರೀನ್ ವ್ಯೂ ಪ್ರೌಢಶಾಲೆ ಜಟ್ಟಿಪಳ್ಳದಲ್ಲಿ ಅಬ್ದುಲ್ಲ ಅರಂತೋಡು, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ ಡಾ| ಅನುರಾಧ ಕುರುಂಜಿ, ರೋಟರಿ ಪ್ರೌಢಶಾಲೆ ಸುಳ್ಯದಲ್ಲಿ ಪ್ರೊ| ಸಂಜೀವ ಕುದ್ಪಾಜೆ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಬೀರಮಂಗಲ ಇಲ್ಲಿ ಹರೀಶ್ ಬಂಟ್ವಾಳ್, ವಿವೇಕಾನಂದ ಪ್ರೌಢಶಾಲೆ ವಿನೋಬನಗರದಲ್ಲಿ ಕು.ಬೇಬಿ ವಿದ್ಯಾ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ಸಂಪನ್ಮೂಲ ವ್ಯಕ್ತಿಗಳು ೨೦ ನಿಮಿಷ ಮಾತನಾಡಲಿದ್ದು, ಬಳಿಕ ಆಯಾ ಕಾಲೇಜಿನಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ. ಅಲ್ಲೇ ಬಹುಮಾನ ವಿತರಣೆಯೂ ನಡೆಯುವುದು, ಪ್ರತೀ ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕ ವಿತರಣೆಯೂ ನಡೆಯುವುದು ಎಂದವರು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕೋಶಾಧಿಕಾರಿ ಜಜನಾರ್ದನ ನಾಯ್ಕ್, ಡಾ| ಎನ್.ಎ.ಜ್ಞಾನೇಶ್, ಚಂದ್ರಾ ಕೋಲ್ಚಾರ್, ರಾಜು ಪಂಡಿತ್, ಪ್ರಭಾಕರನ್ ನಾಯರ್ ಸಿ.ಹೆಚ್. ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!