Ad Widget

ಡಿ.17ರಂದು ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ರವರ 67ನೇ ಮಹಾ ಪರಿನಿಬ್ಬಾಣ ದಿನಾಚರಣೆ, ಸನ್ಮಾನ.




. . . . . . .

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುಳ್ಯ ತಾಲೂಕು ಸಮಿತಿಯಿಂದ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಡಿ.17ರಂದು ಡಾ| ಬಿ.ಆರ್.ಅಂಬೇಡ್ಕರ್ ರವರ 67ನೇ ಮಹಾ ಪರಿನಿಬ್ಬಾಣ ದಿನಾಚರಣೆಯು ಪಂಜ ಗ್ರಾ.ಪಂ. ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ “ಸಂವಿಧಾನ ಶಿಲ್ಪಿ, ಭಾರತರತ್ನ ಡಾ| ಬಿ.ಆರ್.ಅಂಬೇಡ್ಕರ್ ರವರ 67ನೇ ಮಹಾ ಪರಿನಿಬ್ಬಾಣ ದಿನಾಚರಣೆಯು ಪಂಜ ಗ್ರಾ.ಪಂ. ಸಭಾಭವನದಲ್ಲಿ ಡಿ.17ರಂದು ನಡೆಯಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಸುಳ್ಯ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ, ಸಮಾಜ ಸೇವಕರಿಗೆ, ಜಾನಪದ ಕಲಾಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾದಸಂಸ ಮಂಗಳೂರು ಇದರ ಜಿಲ್ಲಾ ಸಂಚಾಲಕ ಯು.ಕೆ.ಗಿರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ದಲಿತಪರ ಚಿಂತಕ ರಮೇಶ ಕೋಟೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ನಿವೃತ್ತ ಸೈನಿಕ‌ ಕೊರಗಪ್ಪ ಕೊನ್ನಡ್ಕ, ಬಳ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.‌ ಕರಾದಸಂಸ ಮಂಗಳೂರು ಇದರ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಪ್ರಾಸ್ತಾವಿಕ ನ ಮಾತುಗಳನ್ನಾಡಲಿದ್ದಾರೆ.‌ ಮುಖ್ಯ ಅಥಿತಿಗಳಾಗಿ ನಿವೃತ್ತ ಪಶುವೈದ್ಯಾಧಿಕಾರಿಗಳಾದ ಡಾ| ದೇವಿಪ್ರಸಾದ್ ಕಾನತ್ತೂರು ಪಂಜ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕರಾದಸಂಸ ಮಂಗಳೂರು ಇದರ ಜಿಲ್ಲಾ ಖಜಾಂಜಿ ಜಯಕುಮಾರ್, ದಲಿತ ಮುಖಂಡರಾದ ಸದಾಶಿವ ಉರ್ವಸ್ಟೋರ್, ವಿಶ್ವನಾಥ ಅಲೆಕ್ಕಾಡಿ, ಅಚ್ಚುತ ಮಲ್ಕಜೆ, ಕರಾದಸಂಸ ಅರಿಯಡ್ಕದ ಗ್ರಾಮ ಸಂಚಾಲಕರಾದ ಹರೀಶ ಶೇಖಮಲೆ, ಜಿಲ್ಲಾ ಸಮಿತಿ ಸದಸ್ಯರಾದ ಶೀನ ಬಾಳಿಲ, ಗಿರೀಶ್ ಕಡಬ, ಸಂಜಯ ಕುಮಾರ್ ಪೈಚಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು ಅಲ್ಲದೇ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು . ಪತ್ರಕರ್ತರ ಪ್ರಶ್ನೆ ಉತ್ತರಿಸುತ್ತಾ ಮುಂದಿನ ದಿನಗಳಲ್ಲಿ ಅಂಬೆಡ್ಕರ್ ಭವನ ನಿರ್ಮಾಣ ಆಗದೆ ಇರುವ ಹಿನ್ನಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಅಲ್ಲದೆ ಕುಂದು ಕೊರತೆ ಸಭೆಯನ್ನು ಬಾಯ್ಕಟ್ ಮಾಡುತ್ತೆವೆ ಮತ್ತು ಎಲ್ಲರನ್ನು ಸೇರಿಸಿಕೊಂಡು ನಾವು ಮುಂದೆ ಯಾವ ರೀತಿಯಲ್ಲಿ ಅದನ್ನು ಮುಗಿಸಬೇಕು ಎಂದು ಸಭೆ ಸೇರಲು ಒತ್ತಡ ಹೇರುವುದಾಗಿ ತಿಳಿಸಿದರು. ಈ
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ ಅಲೆಕ್ಕಾಡಿ, ಅಚ್ಚುತ ಮಲ್ಕಜೆ, ಉಮೇಶ್ ಮುಪ್ಪೇರ್ಯ, ಶೀನ ಬಾಳಿಲ ಉಪಸ್ಥಿತರಿದ್ದರು.



Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!