Ad Widget

ಸುಳ್ಯದ ಖ್ಯಾತ ಸಾಹಿತಿ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಬೆಂಗಳೂರಲ್ಲಿ ನವಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಿಶ್ವ ಚೇತನ ಬಳಗ ಬೆಂಗಳೂರು ವತಿಯಿಂದ ಜರುಗಿದ 3 ನೇ ಕಲಾ ಸಾಂಸ್ಕೃತಿಕ ಮಹಾ ಸಮ್ಮೇಳನದಲ್ಲಿ ಸುಳ್ಯದ ಖ್ಯಾತ ಸಾಹಿತಿ, ಜ್ಯೋತಿಷಿ, ಸಂಘಟಕ ಮತ್ತು ಗಾಯಕರಾದ ಶ್ರೀ ಎಚ್ ಭೀಮರಾವ್ ವಾಷ್ಠರ್ ಅವರಿಗೆ ಇವರ 25 ವರ್ಷಗಳ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ 2023 ನೇ ಸಾಲಿನ ನವ ಚೈತನ್ಯಶ್ರೀ ರಾಜ್ಯ ಪ್ರಶಸ್ತಿ ಯನ್ನು ವಿಶ್ವ ಚೇತನ ಬಳಗ ಇದರ ಅಧ್ಯಕ್ಷರಾದ ಶ್ರೀ ಶಿವಸ್ವಾಮಿ ಅವರು ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ. ಹಿರಿಯ ಸಾಹಿತಿಗಳಾದ ಪದ್ಮನಾಭ ಡಿ, ಚಂದನ ಸಾಹಿತ್ಯ ವೇದಿಕೆಯ ಗೌರವ ಅಧ್ಯಕ್ಷರಾದ ಶ್ರೀ ಹರಿ ನರಸಿಂಹ ಉಪಾಧ್ಯಯ, ಖ್ಯಾತ ಸಾಹಿತಿ ಶ್ರೀ ಕೋಲ ರಂಗನಾಥ ಇನ್ನಿತರರು ಉಪಸ್ಥಿತರಿದ್ದರು. ಎಚ್. ಭೀಮರಾವ್ ವಾಷ್ಠರ್ ಅವರು ಸುಳ್ಯದಲ್ಲಿ 20 ವರ್ಷಗಳಿಂದ ಖಾಯಂ ನೆಲೆಸಿರುವ ಜನಮನ್ನಣೆ ಗಳಿಸಿದ್ದಾರೆ. ತಮ್ಮ ವಂಶ ಪಾರಂಪರ್ಯ ವೃತ್ತಿಯಾದ ಜ್ಯೋತಿಷ್ಯ ಕಾಯಕವನ್ನು ಮಾಡುತ್ತಿದ್ದಾರೆ. 9 ಕೃತಿಗಳನ್ನು ಹೊರ ತಂದಿದ್ದಾರೆ. ಸಾಹಿತ್ಯ, ಸಂಗೀತ, ಕಲೆಗಳ ಬಗ್ಗೆ ನೂರಾರು ಕಾರ್ಯಕ್ರಮಗಳನ್ನು ಮಾಡಿದ ಉತ್ತಮ ಸಂಘಟಣಕಾರರು. ಎರಡು ಚಲನಚಿತ್ರಗಳನ್ನು ನಿರ್ದೇಶನ ಮಾಡಿದ ಚಿತ್ರನಿರ್ದೇಶಕ. ಇವರಿಗೆ ಇಲ್ಲಿಯವರೆಗೆ ಸಾಕಷ್ಟು ರಾಜ್ಯ ಪ್ರಶಸ್ತಿಗಳು, ಮೂರು ರಾಷ್ಟ್ರ ಪ್ರಶಸ್ತಿಗಳು, ನೂರಾರು ಸನ್ಮಾನಗಳು ಸಿಕ್ಕಿವೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!