Ad Widget

ಹಳದಿರೋಗದಿಂದ ಅಡಿಕೆ ಕೃಷಿಕರ ಸಮಸ್ಯೆ ಕುರಿತು ಸರಕಾರದ ಗಮನ ಸೆಳೆದ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಸ್ಪಂದಿಸಿದ ತೋಟಗಾರಿಕಾ ಸಚಿವ




ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸುಳ್ಯದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಅಡಿಕೆ ಕೃಷಿಗೆ ಹಳದಿರೋಗ ಭಾದೆಯಿಂದ ಕೃಷಿಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಮನವಿ ಮಾಡಿದ್ದಾರು.

. . . . . . . . .


ಏನು ಹೇಳಿದರು ತೋಟಗಾರಿಕಾ ಸಚಿವರು ?

. . . . . . .

ರೋಗ ಬಾಧೆಯ ನಿರ್ದಿಷ್ಟ ಕಾರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ ಹಾಗೂ ಪರ್ಯಾಯ ಬೆಳೆಗೆ ಪ್ರೋತ್ಸಾಹ :


ಶಾಸಕರ ಪ್ರಶ್ನೆಗೆ ಉತ್ತರಿಸಿರುವ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕರ್ಜುನರವರು ಅಡಿಕೆ ಎಲೆ ಹಳದಿ ರೋಗದ ನಿರ್ದಿಷ್ಟ ಕಾರಣ ತಿಳಿಯಲು ಸಂಶೋಧನೆಗೆ ರೂ.50 ಲಕ್ಷ ಅನುದಾನ ಒದಗಿಸಿದ್ದಲ್ಲದೆ, ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕಿ ಭಾಗೀರಥಿ ಮುರುಳ್ಯರವರು ದಕ್ಷಿಣ ಕನ್ನಡ ಜಿಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶೇ.80 ಕ್ಕಿಂತ ಹೆಚ್ಚಿನ ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿದ್ದು, ಹೆಚ್ಚಿನ ಜನರು ಕೃಷಿಕರಾಗಿದ್ದು ಅಡಿಕೆ ಕೃಷಿಯನ್ನು ತನ್ನ ಆದಾಯದ ಮೂಲವನ್ನಾಗಿ ಅವಲಂಬಿಸಿರುತ್ತಾರೆ. ಇತ್ತೀಚಿನ ಸುಮಾರು 30 ವರ್ಷಗಳಿಂದ ಅಡಿಕೆಗೆ ಹಳದಿ ರೋಗ ಹಬ್ಬಿ ಈಗ ರೋಗ ಬಾಧೆ ತೀವ್ರವಾಗಿದ್ದು ಈ ರೋಗವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಯಾವುದೇ ಮರ‍್ಗಗಳಿಲ್ಲದೆ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ. ಈ ಬಗ್ಗೆ, ಸರ್ಕಾರವೇ ಸಾಮುದಾಯಿತವಾಗಿ ಕ್ರಮಕೈಗೊಳ್ಳಬೇಕು ಎಂದು ಅವರು ಕೇಳಿಕೊಂಡಿದ್ದರು.

ಶಾಸಕ ಪ್ರಶ್ನೆಗೆ ಉತ್ತರಿಸಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ ಎಸ್.ಎಸ್. ಮಲ್ಲಿಕರ್ಜುನ ರವರು, ಕರ್ನಾಟಕ ರಾಜ್ಯದಲ್ಲಿ 6.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದ್ದು, 9.33 ಲಕ್ಷ ಮೆ.ಟನ್ ಉತ್ಪಾದನೆ ಮಾಡಲಾಗುತ್ತಿದೆ. ಅಡಿಕೆ ಹಳದಿ ಎಲೆ ರೋಗವು ಒಟ್ಟು 12984 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬಾಧಿಸುತ್ತಿದೆ.

ಚಿಕ್ಕಮಗಳೂರು-9625 ಹೆಕ್ಟೇರ್, ಕೊಡಗು- 2142 ಹೆಕ್ಟೇರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಪ್ರದೇಶದಲ್ಲಿ 1217 ಹೆಕ್ಟೇರ್ ಪ್ರದೇಶದಲಿ, ಹಳದಿ ಎಲೆ ರೋಗವು ಕಂಡುಬಂದಿರುತ್ತದೆ.

ಅಡಿಕೆ ಹಳದಿರೋಗಕ್ಕೆ ಕಾರಣವೇನು?


ಅಡಿಕೆ ಹಳದಿ ಎಲೆ ರೋಗಕ್ಕೆ ಮುಖ್ಯವಾದ ಕಾರಣವೇನೆಂದರೆ ತೋಟಗಳಲ್ಲಿ ಸೂಕ್ತ ನಿರ್ವಹಣೆಯ ಕೊರತೆ, ತೋಟಗಳಲ್ಲಿ, ಸೂಕ್ತ ನೀರು ಬಸಿ ಕಾಲುವೆಗಳ ವ್ಯವಸ್ಥೆ ಇಲ್ಲದಿರುವುದು, ಮಣ್ಣಿನಲ್ಲಿರಬೇಕಾದ ಪೋಷಕಾಂಶಗಳ ಕೊರತೆ ಹಾಗೂ ಫೈಟೊಪಾ ಸ್ನಾ ಎಂಬ ಸೂಕ್ಷ್ಮ ರೋಗಾಣುವಿನ ಬಾಧೆಯಿಂದ ಈ ರೋಗವು ಕಂಡುಬರುತ್ತದೆ.

ಈ ರೋಗ ಬಾಧೆಗೆ ನಿರ್ಧಿಷ್ಟವಾದ ಕಾರಣಗಳನ್ನು ಕಂಡು ಹಿಡಿಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ (ಸಿ.ಪಿ.ಸಿ.ಆರ್. ಐ) ವಿದ್ಯ, ದಕ್ಷಿಣ ಕನ್ನಡ ರವರಿಗೆ ರೂ.50.00 ಲಕ್ಷಗಳ ಅನುದಾನ ಒದಗಿಸಿದ್ದು, ಜನವರಿ-2024 ರಿಂದ ಸಂಶೋಧನೆ ಕೈಗೊಳ್ಳಲು ಕ್ರಮವಹಿಸಲಾಗಿದೆ, ಏತನ್ಮಧ್ಯೆ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಿಕೆ ಬೆಳೆಗೆ ಪರ್ಯಯವಾಗಿ ಇತರೆ ವಾಣಿಜ್ಯ ಬೆಳೆಗಳನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪರ್ಯಯ ಬೆಳೆಗಳನ್ನು ಬೆಳೆಸಲು:


ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಲ್ಲಿ ಅಡಿಕೆ ಬೆಳೆಯ ಬದಲಾಗಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಕಾಫಿ, ಕೋಕೋ, ಕಾಳುಮೆಣಸು, ಜಾಯಿ ಕಾಯಿ, ಬೆಣ್ಣೆ ಹಣ್ಣು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಆಯಾ ಬೆಳೆಗೆ ಅನುಗುಣವಾಗಿ ಶೇ.40ರಷ್ಟು ಪ್ರತಿ ಹೆಕ್ಟೇರ್ ಗೆ ರೂ.11952 ರಿಂದ ರೂ. 123483 ವರೆಗೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್ ವರೆಗೆ ನೀಡಲಾಗುತ್ತಿದೆ.
ರಾಜ್ಯದಲ್ಲಿ. 2022-23 ನೇ ಸಾಲಿನಲಿ.. 812 ಹೆಕ್ಟೇರ್ ಪ್ರದೇಶದಲ್ಲಿ ರ‍್ಯಾಯ ಬೆಳೆಗಳನ್ನು ಬೆಳೆಯಲು 1328 ರೈತ ಫಲಾನುಭವಿಗಳಿಗೆ ರೂ. 488 ಲಕ್ಷ ಸಹಾಯಧನ ನೀಡಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 191 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು 228 ರೈತ ಫಲಾನುಭವಿಗಳಿಗೆ ರೂ. 148 ಲಕ್ಷ ಸಹಾಯಧನ ನೀಡಲಾಗಿರುತ್ತದೆ.

ಪರ್ಯಾಯ ಬೆಳೆಗಳ ನಿರ್ವಹಣೆ:

ಆಯಾ ಬೆಳೆಗೆ ಅನುಗುಣವಾಗಿ ನಿರ್ವಹಣೆಯ ಶೇ.50 ರಷ್ಟು ಪ್ರತಿ ಹೆಕ್ಟೇರ್ ಗೆ ರೂ.2509 ರಿಂದ ರೂ. 18017 ವರೆಗೆ ಸಹಾಯಧನವನ್ನು ಗರಿಷ್ಠ 4 ಹೆಕ್ಟೇರ್ ವರೆಗೆ ನೀಡಲಾಗುತ್ತಿದೆ.

ರಾಜ್ಯದಲಿ., 2023-24 ನೇ ಸಾಲಿನಲ್ಲಿ ಈ ಬಾಬ್ರು 524 ಹೆಕ್ಟೇರ್ ನಿರ್ವಹಣೆಗೆ 460 ಫಲಾನುಭವಿಗಳಿಗೆ ರೂ. 67.81 ಲಕ್ಷ ಸಹಾಯಧನ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರ‍್ಯಾಯ ಬೆಳೆಗಳ ನಿರ್ವಹಣೆಗೆ 65 ಹೆಕ್ಟೇರ್ ಪ್ರದೇಶಕ್ಕೆ 67 ಫಲಾನುಭವಿಗಳಿಗೆ ರೂ. 10.84 ಲಕ್ಷ ಸಹಾಯಧನ ನೀಡಲಾಗುತ್ತಿದೆ.
ಇಲಾಖಾ ವತಿಯಿಂದ ಅಡಿಕೆ ತೋಟಗಳ ಪೋಷಕಾಂಶ ನಿರ್ವಹಣೆ, ಬಸಿ ಕಾಲುವೆಗಳನ್ನು ಮಾಡುವುದು, ಹಸಿರೆಲೆ ಗೊಬ್ಬರದ ಬಳಕೆ ಹಾಗೂ ರಸ ಗೊಬ್ಬರಗಳ ಪೂರೈಕೆಗಳ ಕುರಿತು ವಿಶ್ವವಿದ್ಯಾಲಯದ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಕೈಪಿಡಿ, ಕರಪತ್ರಗಳು ಮತ್ತಿತರೆ ಸಮೂಹ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಹಾಗೂ ತರಬೇತಿ/ಕರ್ಯಗಾರಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸಚಿವರು ಭಾಗೀರಥಿ ಮುರುಳ್ಯರವರ ಪ್ರಶ್ನೆಗೆ ಸ್ಪಂದಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading