ರಾಜ್ಯಾದ್ಯಂತ ಇದೀಗ ಚುನಾವಣಾ ಆಯೋಗವು ಚುನಾವಣಾ ಗುರುತಿನ ಚೀಟಿಯಲ್ಲಿ ಡಬಲ್ ಎಂಟ್ರಿ ಹಾಗೂ ಶೇಕಡವಾರು ಕಡಿಮೆ ಮತದಾನ ಆಗುತ್ತಿರುವ ಹಿನ್ನಲೆಯಲ್ಲಿ ಇದೀಗ ಮೇಜರ್ ಸರ್ಜರಿಗೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಈ ರೀತಿಯ ಕೆಲವೊಂದು ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಾರಣಗಳು ಏನು ಗೊತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸುಳ್ಯದ ವ್ಯಕ್ತಿಯನ್ನು ಹೋಲುವ ಗುರುತಿನ ಚೀಟಿಯು ಜಮ್ಮುವಿನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಇದು ಯಾವುದೇ ರೀತಿಯ ಭಯೋತ್ಪಾದಕ ನಂಟು ಅಲ್ಲ. ಅದಕ್ಕೆ ಕಾರಣ ಒಂದೇ ತರಹದ ಭಾವಚಿತ್ರ ಮತ್ತು ಒಂದೇ ತರಹದ ವಿಳಾಸ ಕಾರಣವಾಗಿದೆ ಎಂದು ಸ್ಪಷ್ಟ ಪಡಿಸಿದ್ದು ಇದೀಗ ಡಬಲ್ ಎಂಟ್ರಿ ಮತ್ತು ಒಂದೇ ತರಹದ ಮತದಾರರ ಗುರುತಿನ ಚೀಟಿ ಕಂಡಲ್ಲಿ ಅವರಿಗೆ ನೋಟಿಸ್ ಗಳನ್ನು ನೀಡಿ ದಾಖಲೆಗಳನ್ನು ಹಾಜರು ಪಡಿಸಿ ದ್ವಿಪ್ರತಿಯಾದಲ್ಲಿ ಒಂದು ಡಿಲೀಟ್ ಆಗಲಿದೆ. ಅಲ್ಲದೇ ಒಂದೇ ಮಾದರಿಯ ಭಾವಚಿತ್ರವಿದ್ದಲ್ಲಿ ಅವುಗಳಿಗೂ ಕೂಡ ಪರಿಹಾರ ಮಾಡಲಿದ್ದೇವೆ. ಇದೀಗ ಸುಳ್ಯದಲ್ಲಿ ಸುಮಾರು ಇಂತಹ ಐದು ಸಾವಿರ ಗುರುತಿನ ಚೀಟಿಗಳು ಇದೆ ಅದು ಯಾವ ಮಾದರಿ ಅಂದರೆ ತಾಲೂಕು , ಜಿಲ್ಲೆ , ರಾಜ್ಯ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಒಂದೇ ತರಹದಲ್ಲಿ ಕಂಡಲ್ಲಿ ಅದನ್ನು ಪರಿಶೀಲನೆ ನಡೆಸುವ ಕಾರ್ಯಕ್ರಮ ಇದಾಗಿದೆ. ಇದಕ್ಕೆ ಆತಂಕ ಪಡಬೇಕಾದ ಅಗತ್ಯತೆ ಇಲ್ಲ ಎಂದು ಚುನಾವಣಾ ಶಾಖೆಯ ಕೌಶಿಕ್ ಸ್ಪಷ್ಟಪಡಿಸಿದ್ದಾರೆ.
- Saturday
- November 23rd, 2024