ಗುತ್ತಿಗಾರು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಡಿ.16ರಂದು ಗುತ್ತಿಗಾರಿನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಚಂದ್ರಶೇಖರ ಬಾಳುಗೋಡು ಹೇಳಿದರು. ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.ಪ್ರವೀಣ್ ಮುಂಡೋಡಿ ಮಾತನಾಡುತ್ತಾ ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮಣ್ಣ ಶೆಟ್ಟಿ, ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೇ ಇದೀಗ ಸಿಬಿಐ ನೀಡಿದ ವರದಿಯ ಮೇಲೆ ನ್ಯಾಯಾಲಯವು ಆರೋಪಿತನನ್ನು ದೋಷಮುಕ್ತಗೊಳಿಸಿದ್ದು ಹಾಗಾದರೆ ಆರೋಪಿಗಳು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ ಆ ಹಿನ್ನೆಲೆಯಲ್ಲಿ ಇದೀಗ ಇಡೀ ರಾಜ್ಯಾದ್ಯಂತ ಪ್ರತಿ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಗಿ ಸರಕಾರದ ಕಣ್ಣು ತೆರೆಸ ಬೇಕಿದೆ ಎಂದು ಅವರು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ವಿಜೇಶ್ ಹಿರಿಯಡ್ಕ, ಭರತ್ ಕನ್ನಡ್ಕ, ರಾಘವ ಗೌಡ ಆರ್ನೋಜಿ, ದುಷ್ಯಂತ್ ಶೀರಡ್ಕ, ಅರುಣ್ ತಿಪ್ಪನೂರು, ಹರೀಶ್ ಎನ್.ಎಂ, ನೀಲಪ್ಪ ಪೈಕ, ಉಮೇಶ್ ಕಾಂತಿಲ ಉಪಸ್ಥಿತರಿದ್ದರು.
- Thursday
- November 21st, 2024