Ad Widget

ಕೋಲ್ಚಾರು ; ಡಿ. 9,10ರಂದು ಆಲೆಟ್ಟಿ ಪ್ರಿಮಿಯರ್ ಲೀಗ್ (ಎ.ಪಿ.ಎಲ್) ಕ್ರಿಕೆಟ್ ಪಂದ್ಯಾಟ

ಡಿ.9,10: ಕೋಲ್ಚಾರು ಶಾಲಾ ಮೈದಾನದಲ್ಲಿ ಆಲೆಟ್ಟಿ ಪ್ರಿಮಿಯರ್ ಲೀಗ್ (ಎ.ಪಿ.ಎಲ್) ಕ್ರಿಕೆಟ್ ಪಂದ್ಯಾಟವು ನಡೆಯಲಿದೆ. ಆಲೆಟ್ಟಿ ಕ್ರಿಕೆಟ್ ಬೋರ್ಡ್ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಕೋಲ್ಚಾರು ಇದರ ಸಹಯೋಗದಲ್ಲಿ ಆಲೆಟ್ಟಿ ಗ್ರಾಮದ 8 ತಂಡಗಳ ಲೀಗ್ ಮಾದರಿಯ
ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಮ್ಮೂರ ಕ್ರಿಕೆಟ್ ಹಬ್ಬವು ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

. . . . . . .

ಡಿ.9 ರಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಅಂಗಾರ ರವರು ಪಂದ್ಯಾಟವನ್ನು ಉದ್ಘಾಟಿಸಿ,
ಎ.ಪಿ.ಎಲ್.ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.

ಎ.ಒ.ಎಲ್.ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮೈದಾನವನ್ನು ಉದ್ಘಾಟಿಸಲಿದ್ದಾರೆ. ಕೆ.ಪಿ.ಸಿ.ಸಿ. ಸದಸ್ಯ ನಂದಕುಮಾರ್ ಟ್ರೋಫಿ ಅನಾವರಣ ಮಾಡಲಿರುವರು.

ಹೊನಲು ಬೆಳಕಿನ
ನಮ್ಮೂರ ಕ್ರಿಕೆಟ್ ಹಬ್ಬದಲ್ಲಿ ಹಿರಿಯ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಹಿರಿಯ ಕ್ರಿಕೆಟ್ ಆಟಗಾರರಾದ ತೇಜಕುಮಾರ್ ಬಡ್ಡಡ್ಕ, ಪುರುಷೋತ್ತಮ ಕೋಲ್ಚಾರು, ಕೆ.ವಿ.ಪ್ರಕಾಶ್ ಬಡ್ಡಡ್ಕ, ಯತಿರಾಜ್ ಭೂತಕಲ್ಲು, ಗಿರಿಜಾ ಶಂಕರ
ತುದಿಯಡ್ಕ ರವರನ್ನು ಸನ್ಮಾನಿಸಲಾಗುವುದು.


ಪಂದ್ಯಾಟದಲ್ಲಿ ವಿನ್ನರ್ ರೂ. 32,222/- ಎ.ಪಿ.ಎಲ್ ಟ್ರೋಫಿ, ರನ್ನರ್ ಅಪ್ ರೂ. 16,166/- ಎ.ಪಿ.ಎಲ್ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಆಕರ್ಷಕ ಸಿಡಿ ಮದ್ದಿನ ಪ್ರದರ್ಶನ ನಡೆಯಲಿರುವುದು.

ಎ.ಪಿ.ಎಲ್ ಸಮಿತಿಯ
ಅಧ್ಯಕ್ಷ ಹರೀಶ್ ಕೊಯಿಂಗಾಜೆ ಯವರ ನೇತೃತ್ವದಲ್ಲಿ ಆಲೆಟ್ಟಿ ಕ್ರಿಕೆಟ್ ಬೋರ್ಡ್ ಕಮಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದೊಂದಿಗೆ ಪಂದ್ಯಾಟದ ಪೂರ್ವ ಸಿದ್ದತಾ ಕಾರ್ಯವು ಭರದಿಂದ ನಡೆಯುತ್ತಿದೆ.
ಪಂದ್ಯಾಟದಂದು ಆಟಗಾರರಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದು ಎ.ಪಿ.ಎಲ್ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ ತಿಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!