ಸುಬ್ರಹ್ಮಣ್ಯ ,ಡಿ. 3: ಸುಬ್ರಹ್ಮಣ್ಯದ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ಲೀಜನ್ ವತಿಯಿಂದ ರವಿವಾರದಂದು ಕುಲಕುಂದದಿಂದ ಕೈಕಂಬದ ವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಟಿ ಜಾತ್ರೆ ಡಿಸೆಂಬರ್ 9ರಿಂದ ಮೂಲಮೃತಿಕ ಪ್ರಸಾದ ತೆಗೆಯುವುದು ಹಾಗೂ ಮರುದಿನ ಕೊಪ್ಪರಿಗೆ ಏರುವುದೊಂದಿಗೆ ಆರಂಭಗೊಂಡು ಡಿ. 24ರಂದು ಕೊಪ್ಪರಿಗೆ ಇಳಿಯುವುದು ರೊಂದಿಗೆ ಸಮಾಪನಗೊಳ್ಳಲಿದೆ. ಇದೀಗ ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯದರೊಂದಿಗೆ ಪುನೀತರಾಗುತ್ತಿದ್ದಾರೆ. ಭಕ್ತಾದಿಗಳು ದೂರ ದೂರಗಳಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸ್ತಕಂತ ಸಂದರ್ಭದಲ್ಲಿ ಮಾರ್ಗದ ಇಕ್ಕೆಲಗಳಲ್ಲಿ ಬಹಳಷ್ಟು ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟ್ಲಿಗಳು, ನೀರಿನ ಕ್ಯಾನುಗಳು, ಆಹಾರ ಪಟ್ಟಣಗಳನ್ನ ,ಎಸೆದು ಇಡೀ ಪರಿಸರವನ್ನ ಮಾಲಿನ್ಯ ಮಾಡತಕ್ಕದ್ದು ಕಂಡು ಬರುತ್ತಿದೆ. ಇದನ್ನ ಮನಗಂಡ ಡಾlರವಿ ಕಕ್ಕೆ ಪದವ್ ಸಮಾಜ ಸೇವಾ ಟ್ರಸ್ಟ್ ನವರು ತನ್ನ ಸುಮಾರು 60 ಕು ಮಿಕ್ಕಿ ಸ್ವಯಂಸೇವಕರೊಂದಿಗೆ ಪ್ರತಿ ವಾರ ರವಿವಾರದಂದು ಬೆಳಿಗ್ಗೆ 6:00ಯಿಂದ 9 ಗಂಟೆವರೆಗೆ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನ ಮಾಡುತ್ತಾ ಬಂದಿರುವರು .ಡಿ 3 ರ ರವಿವಾರದಂದು ಕುಲಕುಂದದಿಂದ ಕೈಕಂಬದ ವರೆಗೆ ಮಾರ್ಗದ ಇಕ್ಕರೆಗಳಲ್ಲಿ ಇದ್ದ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಆಹಾರ ಪಟ್ಟಣಗಳು ,ಇನ್ನಿತರ ಕಚ್ಚಾ ವಸ್ತುಗಳನ್ನ ಸ್ವಚ್ಛತೆ ಮಾಡು ವುದರೊಂದಿಗೆ ಸೇವಾ ಕಾರ್ಯವನ್ನ ಕೈಗೊಂಡಿರುವರು. ಈ ಸಂದರ್ಭದಲ್ಲಿ ಸೀನಿಯರ್ .ವಿಶ್ವನಾಥ ನಡುತೋಟ ಸೀನಿಯರ್ ಪ್ರಭಾಕರ ಪಟ್ರೆ, ಸೀನಿಯರ್ ಮಣಿಕಂಠ, ಕುಮಾರಧಾರ ರವಿ ಭಾಗವಹಿಸಿರುವರು.
- Saturday
- November 23rd, 2024