ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ಗೋ ರಥವು ಸುಳ್ಯದ ವಿಷ್ಣು ವೃತ್ತದ ಬಳಿ ಪುಸ್ಪಾರ್ಚನೆ ಹಾಗೂ ಹಾರ ಹಾಕಿ ಸುಳ್ಯಕ್ಕೆ ರಥವನ್ನು ಭರಮಾಡಿಕೊಳ್ಳಲಾಯಿತು.
ಗೋ ರಥವು ಸುಳ್ಯದ ವಿಷ್ಣು ವೃತ್ತದಿಂದ ಜ್ಯೋತಿ ವೃತ್ತಕ್ಕೆ ತೆರಳಿ ಅಲ್ಲಿಂದ ಸುಳ್ಯದ ಚೆನ್ನಕೇಶವ ಕಟ್ಟೆಯ ಬಳಿ ಬಂದು ಭಜನೆ ಮತ್ತು ಪೂರ್ಣ ಕುಂಭ ಸ್ವಾಗತದೊಂದಿಗೆ ಚೆನ್ನಕೇಶವ ದಣೆವಲಾಯದ ಬಳಿ ಮೆರವಣಿಗೆ ಸಮಾಪನ ಗೊಂಡಿತು . ಬಳಿಕ ನಡೆದ ಸಭೆಯ ಅಧ್ಯ್ಷತೆಯನ್ನು ಶಾರದಾಂಬ ಸೇವಾ ಸಮಿತಿ ಅಧ್ಯಕ್ಷರಾದ ಚಿದಾನಂದ ಹಳಗೇಟು ವಹಿಸಿದ್ದರು ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಚಂಡಿಕ ಯಾಗಕ್ಕೆ ಸಹಕರಿಸುವಂತೆ ವಿನಂತಿಸಿದರು ಅಲ್ಲದೇ ಇದೊಂದು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ತಾರನಾಥ ಕೊಟ್ಟಾರಿ ಪರಂಗಿ ಪೇಟೆ ಮತನಾಡುತ್ತಾ ಗೋವಿನ ಮಹತ್ವ ಮತ್ತು ರಾಷ್ಟ್ರೀಯತೆ ಹಾಗೂ ತಾಯಿಯಂತೆ ಹಾಲು ಕೊಡುವ ಗೋವನ್ನು ಪ್ರತಿಯೊಂದು ಮನೆಯಲ್ಲು ಸಾಕಬೇಕು ಪೂಜಿಸಬೇಕು ಅಲ್ಲದೆ ಗೋಮಯ ಮತ್ತು ಇತರೆ ಅನುಕೂಲತೆಗಳನ್ನು ತಿಳಿಸಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಜ್ ಸುಳ್ಯದ ಉದ್ಯಮಿಗಳಾದ ವಿಕ್ರಂ ಸಿಂಗ್ ಶುಭ ಹಾರೈಸಿದರು.ದುರ್ಗಾ ವಾಹಿನಿ ಸಂಚಾಲಕಿ ನಮಿತ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲತೀಶ್ ಗುಂಡ್ಯ ಸ್ವಾಗತಿಸಿ ನಿಕೇಶ್ ಉಬರಡ್ಕ ವಂದಿಸಿದರು .