Ad Widget

ಡೆಂಜಿಗುರಿಯಿಂದ ಮನೆಯಲ್ಲಿ ಜಗಳವಾಡಿ ಅಜ್ಜಾವರದ ಬಸ್ಸು ನಿಲ್ದಾಣದಲ್ಲಿ ಕುಳಿತ ಬಾಲಕರು , ಪೋಷಕರ ಜೊತೆ ಕಳುಹಿಸಿಕೊಟ್ಟ ಪೋಲಿಸರು.

ತಂದೆ – ತಾಯಿ‌ಯೊಂದಿಗಿದ್ದ ಮಕ್ಕಳಿಬ್ಬರು ಅವರೊಂದಿಗೆ ಜಗಳವಾಡಿ ಏನನ್ನು ಹೇಳದೇ ಮನೆ ತೊರೆದು ಬಂದ ಘಟನೆ ವರದಿಯಾಗಿದೆ.

. . . . . . . . .

ಈಶ್ವರಮಂಗಳ ಮೂಲದ ದಂಪತಿಗಳ ಇಬ್ಬರು ಮಕ್ಕಳು ಇಂದು ಸಂಜೆ ವೇಳೆಗೆ ಅಜ್ಜಾವರದ ಅಡ್ಪಂಗಾಯ ಬಸ್ ನಿಲ್ದಾಣದಲ್ಲಿ ಇರುವುದನ್ನು ಕಂಡ ಊರವರು ಆ ಮಕ್ಕಳನ್ನು ವಿಚಾರಿಸಿದಾಗ ನಾವು ಈಶ್ವರಮಂಗಲದವರು ಸದ್ಯ ಮಂಡೆಕೋಲು ಗ್ರಾಮದ ಡೆಂಜಿಗುರಿಯಲ್ಲಿ ವಾಸ್ತವ್ಯವಾಗಿದ್ದೆವೆ.‌ ಮನೆಯಲ್ಲಿ ಜಗಳವಾಡಿ ಇಲ್ಲಿಗೆ ನಡೆದುಕೊಂಡೇ ಬಂದಿದ್ದೇವೆ ಎಂದು ಹೇಳಿದರೆನ್ನಲಾಗಿದೆ. ಪೋಲೀಸರಿಗೆ ವಿಷಯ ತಿಳಿದು ಪೋಲೀಸರು ಹೋಗಿ‌ ಮಕ್ಕಳನ್ನು ವಿಚಾರಿಸಿ, ಆ ಇಬ್ಬರು‌ ಮಕ್ಕಳನ್ನು ಮತ್ತೆ ಪೋಷಕರ ಜೊತೆಗೆ ಮಾತನಾಡಿ ಇದೀಗ ಮಕ್ಕಳ ತಾಯಿ ಜೊತೆಗೆ ಠಾಣೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದುಬಂದಿದೆ.

. . . . . . .

ಈ ಮಕ್ಕಳಿಗೆ ಸ್ಥಳೀಯರು‌ ಚಾ – ತಿಂಡಿ‌ ತಿನಿಸುಗಳನ್ನು ನೀಡಿ ಉಪಚರಿಸಿರುವುದಾಗಿ ತಿಳಿದುಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading