

ಪ್ರತಿಯೊಬ್ಬರೂ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಆದರೆ ಮೋಜು ಮಸ್ತಿಯಲ್ಲಿ ದಿನ ಕಳೆದು ಬಿಡ್ತಾರೆ. ಆದ್ರೆ ಅದಕ್ಕೆ ಅಪವಾದ ಎಂಬಂತೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ಚಾರ್ವಾಕದ ದುರ್ಗಾ ಅರ್ಥ್ ಮೂವರ್ಸ್ ಮಾಲಕ ರಾಜೇಶ್ ವಾಲ್ತಾಜೆ ತನ್ನ ಹುಟ್ಟುಹಬ್ಬಕ್ಕೆ ಪ್ರತೀ ವರ್ಷ ಬಡವರ ಮನೆ ಗುರುತಿಸಿ ಅಲ್ಲಿ 250ಕ್ಕೂ ಮಿಕ್ಕಿ ಅಡಿಕೆ ಗಿಡದ ಗುಂಡಿ ತೆಗೆದು ಆ ಮನೆಗೆ ಬೆಳಕು ನೀಡುವ ಕಾರ್ಯ ಮಾಡುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ.