ಕರ್ನಾಟಕ ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಅನುಷ್ಟಾನ ಕಾರ್ಯಕ್ರಮಕ್ಕೆ ಮರ್ಕಂಜ ಪಂಚಾಯಿತ್ ವತಿಯಿಂದ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಇಂದು(ಅ.30)ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಎಂ. ವಿಜೇತ್ ಎಸ್ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಹೋಸೊಳಿಕೆ, ಉಪಾಧ್ಯಕ್ಷರಾದ ಸಂಧ್ಯಾ ಸೇವಾಜೆ, ಎಲ್ಲಾ ಸದಸ್ಯರು, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಂಚಾಯತ್ ಕಾರ್ಯದರ್ಶಿಯಾದ ಪದ್ಮಾವತಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಹಾಗೂ ಮರ್ಕಂಜ ಗ್ರಾಮದ ನಾಗರಿಕರು ಹಾಜರಿದ್ದರು. ಸುಮಾರು ಇನ್ನೂರೈವತ್ತು ಜನ ಸೇರಿದ್ದರು .
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಹೊಸೊಳಿಕೆ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿ ಪಂಚಾಯತ್, ಕಾರ್ಯದರ್ಶಿ ಪದ್ಮಾವತಿಯವರು ವಂದಿಸಿದರು. ಕೊನೆಯದಾಗಿ ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತ್ತು. ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿಯವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಯಿತು.