ಸುಳ್ಯದ ಕಂದಾಯ ಇಲಾಖೆಯ ಕಭೇರಿಯಲ್ಲಿ ಆ.19 ರಂದು ಲೋಕಾಯುಕ್ತ ದಾಳಿಯ ವೇಳೆ ಲಂಚ ಸ್ವೀಕರಿಸಿ ಬಂಧನಕ್ಕೊಳಗಾದ ಗ್ರಾಮ ಆಡಳಿತ ಅಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಇಂದು ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.
ಅರಂತೋಡು ಗ್ರಾಮದ ಹರಿಪ್ರಸಾದ್ ಅಡ್ತಲೆ ದೂರಿನನ್ವಯ ಆ.19 ರಂದು ದಾಳಿ ಸಂಘಟಿಸಿದ್ದ ಲೋಕಾಯುಕ್ತ ಪೋಲೀಸರು ರೂ.5000 ಲಂಚ ಸ್ವೀಕರಿಸುತ್ತಿದ್ದ ಮಿಯಾಸಾಬ್ ಮುಲ್ಲಾ ಅವರನ್ನು ಆ.19 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯದ ಅವರಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ಸುಳ್ಯ ಮೂಲದ ಅಬ್ಬಾಸ್ 50 ಸಾವಿರದ ಬಾಂಡ್ ನೊಂದಿಗೆ ಜಾಮೀನು ನೀಡಿದ್ದಾರೆಂದು ತಿಳಿದುಬಂದಿದೆ.