Ad Widget

ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಕಾಮಗಾರಿ ಪೂರ್ಣ – ಆನೆ ದಾಳಿಯಿಂದ ಕಂಗಾಲಾದ ಕೃಷಿಕರು ನಿರಾಳ

ಸುಳ್ಯ : ತಾಲೂಕಿನ ನಾನಾ ಕಡೆಗಳಲ್ಲಿ ಹಲವಾರು ವರ್ಷಗಳಿಂದ ಆನೆ ಹಾವಳಿ ಹೆಚ್ಚಾಗಿ ಕೃಷಿಕರು ಕಂಗಾಲಾಗಿದ್ದರು. ಇದನ್ನು ತಡೆಯುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿತ್ತು . ಇದನ್ನು ಗಂಭೀರವಾಗಿ ಪರಿಗಣಿಸಿ ಸುಳ್ಯ ಅರಣ್ಯ ಇಲಾಖೆಯು ಮೊದಲು ಆನೆ ಕಂದಕ ನಿರ್ಮಾಣ ಮಾಡಿತ್ತು. ಅದು ಕೆಲವು ಕಡೆಗಳಲ್ಲಿ ಭಾರಿ ಮಳೆಯಿಂದಾಗಿ ಮಣ್ಣು ಬಿದ್ದ ಕಾರಣ ಅಲ್ಲಿ ಆನೆಗಳು ಮತ್ತೆ ಕೃಷಿ ಜಮೀನಿಗೆ ಪ್ರವೇಶಿಸಲು ಆರಂಭಿಸಿದ್ದವು. ಇದಾದ ಬಳಿಕ ಮತ್ತೆ ಅದೇ ಜಾಗದಲ್ಲಿ ಗಟ್ಟಿಯಾದ ಸಿಮೆಂಟ್ ಕಂಬಗಳನ್ನು ಹಾಕಿ ಹಾವಳಿ ತಡೆಯಲು ಪ್ರಯತ್ನಿಸಿದರಾದರೂ ಅದು ಯಾವುದು ಫಲಪ್ರದವಾಗದೇ ಇದ್ದಾಗ ಅರಣ್ಯ ಇಲಾಖೆ ಬಂಡಿಪುರ ಮತ್ತು ಹೊರ ರಾಜ್ಯಗಳಲ್ಲಿ ಅರಣ್ಯ ಇಲಾಖೆ ಅನುಸರಿಸುವ ಕ್ರಮಗಳನ್ನು ಗಮನಿಸಿ ಸರಕಾರಕ್ಕೆ ಮನವಿ ಮಾಡಿತ್ತು. ಸುಳ್ಯ ರೇಂಜ್ ನ ಕೆಲವೆಡೆಗಳಲ್ಲಿ ಆನೆ ದಾಳಿಯ ಬಗ್ಗೆ ಸರಕಾರಕ್ಕೆ ಕೇಳಿಕೊಂಡ ಮೇರೆಗೆ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವಿಕೆ ಯೋಜನೆಯ ಅಡಿಯಲ್ಲಿ ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಎಂಬ ನೂತನ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು .

. . . . .

ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಕಾರ್ಯ

ಸೋಲಾರ್ ಹ್ಯಾಂಗಿಂಗ್ ಪೆನ್ಸ್ ಎಂಬುವುದು ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರದಂತೆ ತಡೆಯುವ ಉಪಯುಕ್ತ ಯೋಜನೆಯಾಗಿದೆ . ಈ ಸೋಲಾರ್ ಯೋಜನೆಯನ್ನು ಒಂದು ಕಿಲೋ ಮೀಟರ್ ಅಳವಡಿಸಲು ಸುಮಾರು 6 ಲಕ್ಷ ರೂ ವೆಚ್ಚ ತಗುಲುತ್ತಿದ್ದು ಇದೀಗ ಈ ಯೋಜನೆಯಲ್ಲಿ ಸುಮಾರು 6 ಕಿಲೋ ಮೀಟರ್ ಪೂರ್ಣ ಗೊಳಿಸಲಾಗಿದೆ . ಅಜ್ಜಾವರ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು ಜನತೆಗೆ ಬಹಳ ಪರಿಣಾಮಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದೀಗ ಸೋಲಾರ್ ಚಾಲಿತ ಬೇಲಿಗೆ ಚಾರ್ಜ್ ಮಾಡಲಾಗಿದ್ದು ಈ ಗುತ್ತಿಗೆಯನ್ನು ಸರಕಾರದ ಮಾನ್ಯತೆ ಪಡೆದ ಸಂಸ್ಥೆಯು ನಿರ್ವಹಿಸುತ್ತಿದೆ. ಅಲ್ಲದೇ ಈ ಯೋಜನೆಯನ್ನು ನಿರ್ವಹಣೆ ಮಾಡಲು ಅರಣ್ಯ ವೀಕ್ಷಕರಿಗೆ ಈಗಾಗಲೇ ತರಬೇತಿ ನೀಡಿದ್ದು ಅದನ್ನು ಮುಂದೇ ಅವರೇ ನಿರ್ವಹಿಸಲಿದ್ದಾರೆ. ಇದು ದಿನದ ೨೪ ಗಂಟೆಯು ಕಾರ್ಯಚರಿಸಲಿದೆ ಅಲ್ಲದೇ ಇದನ್ನು ತಮ್ಮತಮ್ಮ ಮನೆಯ ಬಳಿಯಲ್ಲಿ ಕಾಡುಬಳ್ಳಿಗಳು ಸುತ್ತಿಕೊಳ್ಳುವಾಗ ಅದನ್ನು ಸ್ವಚ್ಚಗೊಳಿಸಲು ಸ್ಥಳೀಯ ವ್ಯಕ್ತಿಗಳು ಕೂಡ ಸಹಕಾರ ನೀಡಬೇಕು ಜೊತೆಗೆ ನಮ್ಮ ಸಿಬ್ಬಂದಿಗಳು ಕೂಡ ಇದರ ನಿರ್ವಹಣೆ ಸಂರಕ್ಷಣೆ ಜವಾಬ್ದಾರಿ ವಹಿಸುತ್ತಾರೆ ಎಂದು ವಲಯ ಅರಣ್ಯಧಿಕಾರಿ ಮಂಜುನಾಥ್ ಹೇಳಿದರು.

ಜನತೆ ಕೈ ಜೋಡಿಸಿದಲ್ಲಿ ಪ್ರತಿ ಆನೆ ದಾಳಿ ಪ್ರದೇಶದಲ್ಲಿ ಈ ಸೋಲಾರ್ ಹ್ಯಾಂಗಿಗ್ ಫೆನ್ಸ್ ನಡೆಸಲು ಸಾಧ್ಯವಿದೆ ಸರಕಾರವು ಶೇ ೫೦ ರಷ್ಟು ಸಬ್ಸಿಡಿ ನೀಡುತ್ತದೆ ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಮತ್ತು ನಮ್ಮ ಕೃಷಿಗಳನ್ನು ರಕ್ಷಿಸಲು ಹಲವಾರು ಕಡೆಗಳಲ್ಲಿ ಈ ಬೇಲಿಯನ್ನು ಅಳವಡಿಕೆ ಮಾಡಿ ಸಫಲತೆ ಕಂಡಿದ್ದಾರೆ. ಅವರಲ್ಲಿ ವಿಚಾರಿಸಿ ಈ ರೀತಿಯ ಬೇಲಿ ನಿರ್ಮಾಣ ಮಾಡಬಹುದು ಎಂದು ಹೇಳಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!