ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಆಧಾರ್ ಗೆ ಸಂಬಂಧಿಸಿದ ಸೇವೆ ಸಿಗುತ್ತಿತ್ತು. ನೆಲ್ಯಾಡಿ, ಕೌಕ್ರಾಡಿ, ಗೊಳಿತೊಟ್ಟು, ಕೊಜಾಲು, ಶಿರಾಡಿ ಮತ್ತು ಶಿಶಿಲ ಇತ್ಯಾದಿಗಳ ಗ್ರಾಮಸ್ಥರು ಇಲ್ಲಿ ಸೇವೆ ಪಡೆಯುತ್ತಿದ್ದರು. ಆದರೆ ಇತ್ತೀಚಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಆಧಾರ್ ಸೇವೆ ಮೊಟಕು ಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಉಪ್ಪಿನಂಗಡಿ, ಕಡಬಕ್ಕೆ ಅಲೆದಾಡುವಂತಾಗಿದೆ. ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಡಿ. ಯಂ ಶಾರಿಖ್ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಮಾಡಿದರು.
- Thursday
- November 21st, 2024