ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಹಿಂದುಗಳು ಒಗ್ಗಟ್ಟಾಗಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗಿ ಹಿಂದು ಸಮಾಜವನ್ನು ಮತ್ತಷ್ಟು ಬಲಿಷ್ಟವಾಗಿ ನಿರ್ಮಿಸಬೇಕು ಎಂದು ಧಾರ್ಮಿಕ ಉಪನ್ಯಾಸ ದಲ್ಲಿ ನಳಿನಾಕ್ಷಿ ಬಿ ಆಚಾರ್ಯ ಹೇಳಿದರು. ಸಮಾರಂಭದ ವೇದಿಕೆಯಲ್ಲಿ ವರಮಹಾಲಕ್ಷ್ಮಿ ಸಮಿತಿ ಅಧ್ಯಕ್ಷರಾದ ಮಮತ ರೈ ಬೆಳಂತಿಮಾರು , ವಿಷ್ಣು ಗೇಮ್ಸ್ ಕ್ಲಬ್ ಅಧ್ಯಕ್ಷರಾದ ಸುನಿಲ್ ರೈ ಮೇನಾಲ , ಭಜನಾ ಮಂದಿರದ ಅಧ್ಯಕ್ಷರಾದ ಕಮಲಾಕ್ಷ ರೈ ಮೇನಾಲ , ಕಿರಣ್ ರೈ ಮೇನಾಲ, ಸುಧಾಕರ , ನಿವೃತ್ತ ಯೋಧ ಲೋಕೇಶ್ ಇರಂತಮಜಲು, ಸಂಶೋಧನಾ ವಿದ್ಯಾರ್ಥಿ ಮಾನಸ ಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಚನ ಸ್ವಾಗತಿಸಿದರು. ಸಂಜೆ ಗಂಟೆ 5 ರಿಂದ ಶ್ರೀ ಕೃಷ್ಣ ಭಜನಾ ಮಂಡಳಿಯ ಮಕ್ಕಳಿಂದ ಭಜನಾ ಕಾರ್ಯಕ್ರಮ ಜರುಗಿತು. ನಂತರ ಝೀ ಕನ್ನಡದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕು. ಶುಭದಾ ಆರ್ ಪ್ರಕಾಶ್ ಇವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಹಾಗು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.