ಅಜ್ಜಾವರ ಗ್ರಾಮದ ಶಿವಪ್ರಕಾಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶಬರಿಮಲೆಗೆ ತೆರಳಿದ ಭಕ್ತರು ಇಂದು ಮುಂಜಾನೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಪಾರ್ಥಿಸಲಾಯಿತು. ಈ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆಯು ಕೆಟ್ಟ ಹೆಸರು ಬರುತ್ತಿದೆ ಇದು ಆಗಬಾರದು ಹಾಗೂ ಅಯ್ಯಪ್ಪನ ಕೃಪಕಟಾಕ್ಷದಿಂದ ಮುಂದಿನ ಸಂಕ್ರಮಣದ ಒಳಗಾಗಿ ಅಯ್ಯಪ್ಪ ಸ್ವಾಮಿಯು ಆ ದುಷ್ಕೃತ್ಯ ನಡೆಸಿದವರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಡಾ. ರವಿ ಕಕ್ಕೆಪದವು ಮತ್ತಿತರರು ಜತೆಗಿದ್ದರು.
- Thursday
- November 21st, 2024