ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಡಾ.ಕುಲದೀಪ್ಎಂ.ಡಿ.ಯವರು ನೇಮಕಗೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮೋದನೆಯ ಮೇರೆಗೆ ತೆರವಿರುವ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿ ಹುದ್ದೆಗೆ ಇವರನ್ನು ನೇಮಿಸಲಾಗಿದೆ.
ಪ್ರಸ್ತುತ ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಯಾಗಿರುವುದಾಗಿ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ನಂದಕುಮಾರ್ ತಿಳಿಸಿದ್ದಾರೆ.
ಡಾ.ಕುಲದೀಪ್ ಇವರು ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ದುಗಲಡ್ಕ ನಿವಾಸಿ ಸೇರ್ಕಜೆ ದಿವಾಕರ ಮತ್ತು ಗೀತಾ ದಂಪತಿಗಳ ಪುತ್ರ. ದಿ. ಡಾ. ಸುಗುಣ ಗೌಡ ಮಿತ್ತಮಜಲುರವರ ಮೊಮ್ಮಗ.