ಬೆಂಗಳೂರು : ಕೊರೋನಾ ಸೋಲಿಸುವ ನಿಟ್ಟಿನಲ್ಲಿ ಭಾರತದ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಅದು ನಮ್ಮ ಬೆಂಗಳೂರಿನಲ್ಲೇ ಅನ್ನುವುದು ಮತ್ತೊಂದು ಹೆಮ್ಮೆಯ ವಿಚಾರ. ಈಗಾಗಲೇ ಪ್ರಸ್ತಾಪವಾದಂತೆ ಕೊರೋನಾ ಗೆ ಆರ್ಯುವೇದವೇ ಪರಿಹಾರ ಅನ್ನುವ ಮಾತು ಸತ್ಯವಾಗುವ ಲಕ್ಷಣ ಗೋಚರಿಸುತ್ತಿದೆ.
ಆಯುರ್ವೇದದಿಂದ ಕೊರೋನಾ ನಿವಾರಣೆರ ಸಾಧ್ಯ ಎಂಬುದು ಇದೀಗ ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ನಿಂದ ದೃಢಪಟ್ಟಿದೆ. ಸರ್ಕಾರದ ಮಾರ್ಗಸೂಚಿಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ಸು ಕಂಡಿದ್ದು ಕೇವಲ 9 ದಿನದಲ್ಲಿ ಕೊರೋನಾ ಪಾಸಿಟಿವ್ ರೋಗಿಗಳು ನೆಗೆಟಿವ್ ವರದಿ ಪಡೆದಿದ್ದಾರೆ.
ಕೊರೋನಾ ವ್ಯಾಪಕವಾಗಿ ಹರಡಲು ಪ್ರಾರಂಭಿಸುತ್ತಿದ್ದಂತೆ ಸಂಶೋಧನೆ ಪ್ರಾರಂಭಿಸಿದ್ದ ಆಯುರ್ವೆದ ವೈದ್ಯ ಡಾ.ಗಿರಿಧರ ಕಜೆ ನೇತೃತ್ವದ ತಂಡ ಮದ್ದು ಕಂಡು ಹಿಡಿದಿತ್ತು. ಪ್ರಯೋಗ ನಡೆಸಲು ಅವಕಾಶ ಕೊಡಿ ಎಂದು ಸರ್ಕಾರ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಜನರ ಒತ್ತಾಯಕ್ಕೆ ಮಣಿದ ಸರ್ಕಾರ ನಿಯಮವಾಳಿ ಪ್ರಕಾರ ಕಜೆಯವರಿಗೆ ಅವಕಾಶ ನೀಡಿತ್ತು.
ಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. 10 ರೋಗಿಗಳ ಮೇಲೆ ಪ್ರಯೋಗ ನಡೆದಿದ್ದು ಅವರೆಲ್ಲರೂ ಕೂಡಾ ಕೊರೋನಾ ಗೆಲ್ಲುವುದೇ ಅನುಮಾನ ಎನ್ನಲಾಗಿತ್ತು. ಆದರೆ ಕಜೆಯವರು ಸಂಶೋಧಿಸಿದ ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳು ಚಮತ್ಕಾರ ಮಾಡಿದೆ.
ಈಗ ನಡೆದಿರುವ ಪ್ರಯೋಗ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕಜೆಯವರು ಸಂಶೋಧಿಸಿದ ಆಯುರ್ವೆದ ಮದ್ದನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಕುರಿತಂತೆ ಚರ್ಚೆ ನಡೆಯುತ್ತಿದೆ.