Ad Widget

ಲೇಖನ : ಭಯವು ನಮ್ಮೊಳಗಿನ ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತದೆ…

. . . . . . .

ನಮ್ಮಲ್ಲಿ ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅನ್ನುವ ಕನಸಿರುತ್ತದೆ. ಆದ್ರೆ “ನಮ್ಮ ಸುತ್ತಲಿರುವವರು ಏನನ್ನುತ್ತಾರೋ, ಅವರೇನನ್ನುತ್ತಾರೋ, ಇವರೇನನ್ನುತ್ತಾರೋ” ಎನ್ನುವ ಭಯ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಆ ಭಯವೇ ನಮ್ಮೊಳಗಿನ ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತದೆ ಮತ್ತು ಜೀವನದಲ್ಲಿ ನಮ್ಮನ್ನು ಮುಂದೆ ಸಾಗಲು ಬಿಡುವುದಿಲ್ಲ. ಆದ್ದರಿಂದ ನಾವು ಜೀವನದಲ್ಲಿ ಮುಂದೆ ಸಾಗಬೇಕಾದರೆ ಮೊದಲು ಆ ಭಯವನ್ನು ಬಿಡಬೇಕು. ಸಾಧನೆಯ ಹಾದಿಯಲ್ಲಿ ಅವಮಾನ-ಅಪಮಾನ, ಕಷ್ಟ-ನೋವು ಎಲ್ಲವೂ ಇದ್ದೇ ಇರುತ್ತದೆ. ಅವೆಲ್ಲವನ್ನೂ ಸ್ವೀಕರಿಸಿ ಮುಂದೆ ಸಾಗಿದರೆ ಮಾತ್ರ ನಾವು ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯ. ಅದುಬಿಟ್ಟು ಅವರೇನನ್ನುತ್ತಾರೋ, ಇವರೇನನ್ನುತ್ತಾರೋ ಅಂತ ಭಯಪಟ್ಟು ಕುಳಿತರೆ ಜೀವನದಲ್ಲಿ ಏನೂ ಸಾಧನೆ ಮಾಡೋದಕ್ಕೆ ಆಗೋದಿಲ್ಲ. ಹೇಳುವವರಿಗೇನು ಮೊದಲು ಅವಮಾನಿಸುತ್ತಾರೆ, ನಂತರ ಅಪಮಾನಿಸುತ್ತಾರೆ. ಆ ಅವಮಾನ, ಅಪಮಾನಗಳಿಗೆ ಕಿವಿ ಕೊಡದೇ ನಾವು ಮುಂದೆ ಸಾಗಿ ಗೆದ್ದರೆ ಅವಮಾನಿಸಿದವರೇ ನಮ್ಮನ್ನು ಸನ್ಮಾನಿಸುತ್ತಾರೆ. ಜೀವನದಲ್ಲಿ ಇತರರ ಹೀಯಾಳಿಕೆಯ ಮಾತುಗಳಿಗೆ ನಾವು ಕುಗ್ಗುವ ಅಥವಾ ಭಯಪಡುವ ಅಗತ್ಯವಿಲ್ಲ. ಏಕೆಂದರೆ “ಬದುಕಿನಲ್ಲಿ ನಮ್ಮ ಸೋಲಿಗೋಸ್ಕರ ಹತ್ತಾರು ಜನರು ಕಾಯುತ್ತಿರಬಹುದು. ಆದರೆ ನಮ್ಮ ಗೆಲುವಿಗೋಸ್ಕರ ನೂರಾರು ಜನರು ಪ್ರಾರ್ಥಿಸುತ್ತಿರುತ್ತಾರೆ.”ಕೊನೆಯಲ್ಲಿ ಒಂದು ಮಾತು :- “ಈ ಜಗತ್ತಿನಲ್ಲಿ ನೋವುಗಳೇ ಇಲ್ಲದವರು, ಕಷ್ಟಗಳನ್ನು ಅನುಭವಿಸದೇ ಇರುವವರು ಯಾರೂ ಇಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳಿರುತ್ತವೆ, ನೋವಿನ ಕಥೆಗಳು ಇದ್ದೇ ಇರುತ್ತವೆ. ಆದರೆ ಆ ಕಷ್ಟ-ನೋವುಗಳು ನಮ್ಮ ಬದುಕಿಗೆ ಆತ್ಮವಿಶ್ವಾಸ ತುಂಬುವ ಇಂಧನವಾಗಬೇಕೇ ಹೊರತು ನಮ್ಮ ಕಷ್ಟವನ್ನು ನೋಡಿ ನಗುತ್ತಿರುವವರಿಗೆ, ನಮ್ಮ ಸೋಲಿಗೋಸ್ಕರ ಕಾಯುತ್ತಿರುವವರಿಗೆ ಆಯುಧವಾಗಬಾರದು…

✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!