Ad Widget

ಕರಿಕೆಯಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆ – ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟನೆ

ಕ್ಯಾಂಪ್ಕೋ ಹಾಗೂ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಸಹಾಭಾಗಿತ್ವದೊಂದಿಗೆ 14.08.2023ರಂದು ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸದಸ್ಯ ಬೆಳೆಗಾರರ ಸಭೆ ನಡೆಯಿತು.ಕಾರ್ಯಕ್ರಮದ ಉದ್ಘಾಟಕರಾದ ಕ್ಯಾಂಪ್ಕೋ ಸಂಸ್ಥೆಯ ಮಾನ್ಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅವರು ಕಾಳುಮೆಣಸು ಖರೀದಿಗೆ ಚಾಲನೆ ನೀಡಿದರು. ಕ್ಯಾಂಪ್ಕೋದ ಬೆನ್ನೆಲುಬು ಆದ ರೈತರ ಮೂಲಕ ದೀಪ ಬೆಳಗಿಸಲಾಯಿತು. ಕ್ಯಾಂಪ್ಕೋದ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಅವರು ಕಾರ್ಯಕ್ರಮಕ್ಕೆ ಸ್ವಾಗತವನ್ನು ನೀಡಿದರು. ಮಾನ್ಯ ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್. ಎಂ. ಕೃಷ್ಣ ಕುಮಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ತದನಂತರ ಸದಸ್ಯ ಬೆಳೆಗಾರರ ಜೊತೆ ನಡೆದ ವಿಚಾರ ವಿನಿಮಯದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಸಮರ್ಪಕ ಪರಿಹಾರಗಳನ್ನು ಸೂಚಿಸಿದರು. ಅಲ್ಲದೆ ಮಾರುಕಟ್ಟೆ ಸ್ಥಿರತೆಯಲ್ಲಿ ಕ್ಯಾಂಪ್ಕೋದ ಪಾತ್ರ ಹಾಗೂ ಸದಸ್ಯರಿಗೆ ಕ್ಯಾಂಪ್ಕೋದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಮಯದಲ್ಲಿ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ಶರಣ್ ಕುಮಾರ್ ಬೇಕಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಧನ್ಯವಾದ ಸಮರ್ಪಣೆ ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading