ಭಾರತದ ವೈವಿಧ್ಯತೆ ಮತ್ತು ಸಾಮರಸ್ಯದ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರತಿಜ್ಞೆಗೈಯ್ಯೋಣ – ಅಹ್ಮದ್ ನಈಂ ಫೈಝಿ ಸಂಪಾಜೆ: ಹಯಾತುಲ್ ಇಸ್ಲಾಂ ಮದ್ರಸಾ ಕಲ್ಲುಗುಂಡಿ ಇದರ ವಠಾರದಲ್ಲಿ ಭಾರತದ ಭವ್ಯ ಸ್ವಾತಂತ್ರ್ಯೋತ್ಸವ ಆಚರಣೆ ವಿಜೃಂಭಣೆಯಿಂದ ನಡೆಯಿತು . ಕಲ್ಲುಗುಂಡಿ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ಬಾಸ್ ಸಂಟ್ಯಾರ್ ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು . ಸ್ಥಳೀಯ ಖತೀಬ್ ಅಹ್ಮದ್ ನಈಂ ಫೈಝಿ ಸ್ವಾತಂತ್ರ್ಯ ದಿನದ ಸಂದೇಶ ಭಾಷಣ ನಡೆಸಿ , ಭಾರತವು ವಿವಿಧತೆಯಲ್ಲಿ ಏಕತೆಯೆಂಬ ಆಶಯವನ್ನು ಜಗತ್ತಿಗೆ ಸಾಧಿಸಿ ತೋರಿಸಿದ ಶ್ರೇಷ್ಠ ದೇಶವಾಗಿದೆ . ಎಲ್ಲರೂ ಒಂದಾಗಿ ಗಳಿಸಿಕೊಂಡ ದೇಶದ ಸ್ವಾತಂತ್ರ್ಯವನ್ನು ಎಲ್ಲರೂ ಒಂದಾಗಿ ಉಳಿಸಿಕೊಳ್ಳುವ ಪ್ರಯತ್ನವನ್ನು ಇಂದು ಅನಿವಾರ್ಯವಾಗಿ ಮಾಡಬೇಕಿದೆ .ಈ ದೇಶದ ವೈವಿಧ್ಯತೆ ಮತ್ತು ಸಾಮರಸ್ಯದ ಪರಂಪರೆಯನ್ನು ಕಾಪಾಡಲು ಈ ದಿನದಲ್ಲಿ ನಾವು ಪ್ರತಿಜ್ಞೆಗೆಯ್ಯಬೇಕು ಎಂದು ಕರೆ ನೀಡಿದರು . ಹಯಾತುಲ್ ಇಸ್ಲಾಂ ಮದ್ರಸಾ ಸದರ್ ಮುಅಲ್ಲಿಂ ಇಬ್ರಾಹಿಂ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್ ಶುಭ ಹಾರೈಸಿದರು. ಮದ್ರಸಾ ಅಧ್ಯಾಪಕರಾದ ಸಾಜಿದ್ ಅಝ್ಹರಿ ಪೇರಡ್ಕ ಸ್ವಾತಂತ್ರ್ಯ ದಿನದ ಪ್ರತಿಜ್ಞಾವಿಧಿ ಭೋಧಿಸಿದರು . ಸ್ವಾತಂತ್ರ್ಯೋತ್ಸವದ ಭಾಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು . ಮದ್ರಸಾ ಅಧ್ಯಾಪಕರಾದ ಇಬ್ರಾಹಿಂ ವಹಬಿ ಪೈಂಬಚ್ಚಾಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ , ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ರಝಾಕ್ ಸೂಪರ್ , ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಇಬ್ರಾಹಿಂ ಎ.ಕೆ , ಫಾತಿಮಾ ಫಾಳಿಲಾ ಮಹಿಳಾ ಶರೀಅತ್ ಕಾಲೇಜು ಪ್ರಧಾನ ಕಾರ್ಯದರ್ಶಿ ಹಸೈನಾರ್ ಎ.ಕೆ , ಜಮಾಅತ್ ಸಮಿತಿ ಪದಾಧಿಕಾರಿಗಳು , ಪೋಷಕರು , ಹಳೆ ವಿದ್ಯಾರ್ಥಿಗಳು ಮತ್ತು ಮದ್ರಸಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
- Saturday
- November 2nd, 2024