✍️ ಭಾಸ್ಕರ ಜೋಗಿಬೆಟ್ಟು
ನಮಗೆ ಈ ವರ್ಷ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ದೇಶಾದ್ಯಂತ ಈ ಸಂದರ್ಭದಲ್ಲಿ ಪ್ರತಿಯೊಂದು ಮನೆ , ಕಛೇರಿಗಳಲ್ಲಿ ಬಾವುಟವನ್ನು ಹಾರಿಸುವುದರ ಮೂಲಕ ಗೌರವವನ್ನು ಸೂಚಿಸಲಾಗುತ್ತದೆ. ಮಕ್ಕಳಿಗೆ ಬೇರೆ ಚಟುವಟಿಕೆಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಲಾಗುತ್ತದೆ.
ಮಕ್ಕಳಿಗೆ ದೇಶಪ್ರೇಮದ ಬಗ್ಗೆ ತಿಳುವಳಿಕೆ ನೀಡಬೇಕು
ಇಂದಿನ ಮಕ್ಕಳೆ ಮುಂದಿನ ಜನಾಂಗ. ಇಂದಿನ ಯುವ ಸಮುದಾಯಕ್ಕೆ ದೇಶ ಪ್ರೇಮದ ಬಗೆಗಿನ ತಿಳುವಳಿಕೆ ನೀಡುವುದು ಅಗತ್ಯವಿದೆ. ಯಾಕೆಂದರೆ ಮಕ್ಕಳಿಗೆ ದೇಶದ ಸ್ವಾತಂತ್ರ್ಯ , ಹೋರಾಟಗಾರರು ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಅಷ್ಟೇ ಅಲ್ಲದೆ ನಮ್ಮ ದೇಶದ ಬಗ್ಗೆ ಇನ್ನಷ್ಟು ಹೆಚ್ಚು ಕಾಳಜಿ ವಹಿಸುವ ಬಗೆಗಿನ ಚರ್ಚೆಗಳು ವಿದ್ಯಾರ್ಥಿಗಳು ಮಾಡಬೇಕು.
ದೇಶದ ಅಭಿವೃದ್ಧಿ, ಭದ್ರತೆ, ಸ್ವಚ್ಚತೆ , ದೇಶಕ್ಕೆ ಮಾರಕವಾಗಬಲ್ಲ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ,ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಲ್ಲದೆ ಸ್ವಾತಂತ್ರ್ಯ ಹೋರಾಟದ ಹಲವಾರು ವಿಚಾರಗಳು ಸತ್ಯ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ / ಯವ ಸಮುದಾಯದ ಜನರಿಗೆ ಅರ್ಥೈಸುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ಸ್ಕೌಟ್ಸ್ ಗೈಡ್ ಹಾಗೂ ಎನ್ ಸಿ ಸಿ ಮುಂದಾದ ದೇಶಪ್ರೇಮವನ್ನು ಹುಟ್ಟಿಸುವ ಶಿಕ್ಷಣದಲ್ಲಿ ಪ್ರತಿಯೊಂದು ವಿದ್ಯಾರ್ಥಿ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ದೇಶ ಭಕ್ತಿ ಮೂಡಿಸುವ ದೇಶ ಭಕ್ತಿಗೀತೆಗಳನ್ನು ಹಾಡಿಸುವುದು , ನಾಟಕ , ಛದ್ಮವೇಶ , ದೇಶ ಭಕ್ತಿ ಮೂಡಿಸುವ ಚಿತ್ರ ಕಲಾ ಸ್ಪರ್ಧೆ, ಆಕೃತಿಯನ್ನು ಬಿಡಿಸುವುದು. ಇಲ್ಲಿ ದೇಶದ ಸ್ವಾತಂತ್ರ್ಯ ಅಂದಮೇಲೆ ದೇಶದ ಭದ್ರತೆಯಿಂದ ಹಿಡಿದು ದೇಶದ ಅಭಿವೃದ್ಧಿಗೆ ಬೇಕಾದ ಎಲ್ಲಾ ತಿಳುವಳಿಕೆಯನ್ನು ಹೊಂದಿರುತ್ತದೆ. ದೇಶದ ಸ್ವಾತಂತ್ರ್ಯ ದಿನಾಚರಣೆಯ ಪ್ರಾಮುಖ್ಯತೆಯನ್ನು ಮಕ್ಕಳಿಗೆ ಅರ್ಥೈಸುವುದರ ಮೂಲಕ ದೇಶದ ಅಭಿವೃದ್ಧಿ, ದೇಶದ ಬಗ್ಗೆ ಇರುವ ಕಾಳಜಿ, ದೇಶಪ್ರೇಮ ಇಮ್ಮಡಿಯಾಗುತ್ತದೆ.
ಒಟ್ಟಿನಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಎಲ್ಲ ರೀತಿಯಲ್ಲೂ ದೇಶದ ಬಗ್ಗೆ ಕಾಳಜಿ , ದೇಶಪ್ರೇಮ ಹೊಂದುವುದರಿಂದ ನಮ್ಮ ದೇಶವು ಜಗತ್ತಿನಲ್ಲಿ ಬಲಿಷ್ಠವಾಗಿ ಎದ್ದು ನಿಲ್ಲುವುದರಲ್ಲಿ ಸಂಶಯವಿಲ್ಲ.