Ad Widget

ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಜಿತ್ ಮೃತ್ಯು

ಸುಳ್ಯ ಶಾಂತಿನಗರ ನಿವಾಸಿ 17 ವರ್ಷದ ಬಾಲಕ ಹೊಟ್ಟೆ ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತ ಬಾಲಕ ಸುಳ್ಯ ಶಾಂತಿನಗರ ನಿವಾಸಿ ಸಂಜೀವ ಎಂಬುವರ ಪುತ್ರ ಶ್ರೀಜಿತ್. ಈತನಿಗೆ ಕಳೆದ ಎರಡು ದಿನಗಳಿಂದ ಹೊಟ್ಟೆ ನೋವು ಕಾಣಿಸಿದ್ದು ಆಗಸ್ಟ್ 13ರಂದು ನೋವು ಉಲ್ಬಣಗೊಂಡು ಮನೆಯವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಂದಿದ್ದರು. ಬಳಿಕ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿದ್ದು ಬಾಲಕನಿಗೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಹೇಳಿದಾಗ ಆತನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಮನೆಯವರು ಕೊಂಡೊಯ್ದರು.ಅಲ್ಲಿ ನಿನ್ನೆ ಸಂಜೆ ಶಸ್ತ್ರ ಚಿಕಿತ್ಸೆ ನಡೆದಿದ್ದು ಬಳಿಕ ಬಾಲಕನ ಸ್ಥಿತಿ ಗಂಭೀರವಾದಾಗ ಮಂಗಳೂರು ಕೆ ಎಂ ಸಿ ಆಸ್ಪತ್ರೆಗೆ ಕೊಂಡಯ್ಯುವಂತೆ ಅಲ್ಲಿಯ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದ್ದು ಇಂದು ಬೆಳಿಗ್ಗೆ ಆತನನ್ನು ಮಂಗಳೂರು ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಮೃತ ಬಾಲಕ ತಾಯಿ ಪ್ರೇಮ, ಸಹೋದರ ಶ್ರೀನಿತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಇದೀಗ ಬಾಲಕನ ಸಾವಿಗೆ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯರು ಕಾರಣವೆಂದು ಬಾಲಕನ ಪೋಷಕರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading