ಸುಳ್ಯದ ಅರಂಬೂರು ಬಳಿಯ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯ ಶವವನ್ನು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಮಡಿಕೇರಿ ತಾಲೂಕು ಎಂ ಚೆಂಬು ಗ್ರಾಮದ ಬಾಲಕೃಷ್ಣ (65 ವರ್ಷ) ಎಂದು ಗುರುತಿಸಲಾಗಿದೆ . ಮಿನುಂಗೂರು ಮನೆಯ ಬಾಲಕೃಷ್ಣ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆಗಸ್ಟ್ 8ರಂದು ಚೆಂಬುವಿನಲ್ಲಿರುವ ತನ್ನ ಮನೆಯಿಂದ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಅರಂತೋಡಿಗೆ ತೆರಳಿದ್ದರು. ಹಾಗೆ ಬಂದವರು ಅರಂತೋಡಿನಿಂದ ವ್ಯಾನ್ ಹತ್ತಿ ಸುಳ್ಯಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಮರಳಿ ವಾಪಸ್ ಮನೆಗೆ ಬಂದಿರಲಿಲ್ಲ. ಎಲ್ಲಿ ಹೋದರು ಏನು ಆದರು ಅನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಈ ಕುರಿತಂತೆ ಮನೆಯವರು ತೀವ್ರ ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರುಘಟನೆ ನಡೆದು ಆರು ದಿನಗಳ ನಂತರ ಪಾಲಡ್ಕ ಬಳಿ ಪಯಸ್ವಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತ. ಈ ಶವ ಬಾಲಕೃಷ್ಣ ಅವರದ್ದು ಆಗಿರಬಹುದು ಎಂದು ಶಂಕಿಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮನೆಯವರು ಪರಿಶೀಲನೆ ನಡೆಸಿ ಬಾಲಕೃಷ್ಣರದ್ದು ಎಂದು ಪುತ್ರ ವಿಖ್ಯಾತ್ ಮತ್ತು ಪುತ್ರಿ ಸುಶ್ಮಿತ ಖಚಿತಪಡಿಸಿದ್ದಾರೆ.ಇದೀಗ ಪೋಲಿಸ್ ಪೋಸ್ ಮಾಸ್ಟಂ ಬಾಕಿ ಇದ್ದು ಸಂಸ್ಕಾರ ಕಾರ್ಯವು ಕೊಡಿಯಾಳಬೈಲು ರುದ್ರಭೂಮಿಯಲ್ಲಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
- Thursday
- November 21st, 2024