ಉಕ್ರಾಜೆ ಬೈಲು ಕಾಡಿನೊಳಗೆ ಆ.12ರಂದು ಸಂಜೆ ಕಡವೆ ದೇಹವೊಂದು ಪತ್ತೆಯಾಗಿದ್ದು, ಈ ಕಡವೆ ಗುಂಡೇಟಿನಿಂದ ಮೃತಪಟ್ಟಿದೆ ಎಂದು ಖಚಿತಪಟ್ಟಿದೆ.
ಇಂದು ಸುಳ್ಯ ಎ.ಸಿ.ಎಫ್. ಪ್ರವೀಣ್ ಶೆಟ್ಟಿ, ರೇಂಜರ್ ಮಂಜುನಾಥ್ ಮತ್ತು ಸಿಬ್ಬಂದಿ ವರ್ಗ, ಸುಳ್ಯ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿ ವರ್ಗದ ಜೊತೆಗೆ ಅರಂತೋಡು ಉಕ್ರಾಜೆ ಬೈಲಿಗೆ ಹೋಗಿ ಪೋಸ್ಟ್ ಮಾರ್ಟಂ ನಡೆಸಿದ ವೇಳೆ ಕಡವೆಗೆ ಗುಂಡು ಹೊಡೆದು ಕೊಂದಿರುವುದು ಖಚಿತಪಟ್ಟಿದೆ.
ಸುಮಾರು ಆರು ವರ್ಷದ ಹೆಣ್ಣು ಕಡವೆಯ ಹೊಟ್ಟೆಯ ಭಾಗದಿಂದ ಗುಂಡು ದೇಹದೊಳಗೆ ಸೇರಿರುವ ಗಾಯವಿದೆ. ದೇಹದೊಳಗೆ ತೋಟೆ ಬೆಡಿಯ ಸೀಸದ ಚಿಲ್ಲ್ ಗಳು ಪತ್ತೆಯಾಗಿದ್ದು ಈ ಕಡವೆಗೆ ಎರಡು ದಿನಗಳ ಹಿಂದೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಲಯಾರಣ್ಯಾಧಿಕಾರಿಗಳು ಗುಂಡು ಹೊಡೆದವರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ವೈದ್ಯಾಧಿಕಾರಿಗಳ ವರದಿಯ ಪ್ರಕಾರ ಪ್ರಕರಣ ದಾಖಲಿಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.