ದೇವ ಕಂದ್ರಪ್ಪಾಡಿ ಮೂಲಕ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಕನ್ನಡಕಜೆ (ಗುರುಪುರ) ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ.
ಕಳೆದ ವರ್ಷ ಈ ಭಾಗದ ರಸ್ತೆ ಅಭಿವೃದ್ಧಿಯಾಗಿದ್ದು ಕನ್ನಡಕಜೆ ಬಳಿ ರಸ್ತೆ ತಗ್ಗನ್ನು ಮಣ್ಣು ಹಾಕಿ ಎತ್ತರಿಸಲಾಗಿತ್ತು. ಒಂದು ವರ್ಷ ಕಳೆದ ಬಳಿಕ ಕಾಂಕ್ರೀಟ್ ಹಾಕಲು ತೀರ್ಮಾನಿಸಲಾಗಿತ್ತು. ಆದರೇ ಈ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದ್ದು ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಪರ್ಯಾಯ ರಸ್ತೆಯನ್ನು ಬಳಸಲು ಅವಕಾವವಿದ್ದು ವಾಹನ ಸವಾರರು ಮಾವಿನಕಟ್ಟೆ ರಸ್ತೆಯಲ್ಲಿ ತೆರಳಬಹುದಾಗಿದೆ.