✍️ಭಾಸ್ಕರ ಜೋಗಿಬೆಟ್ಟು
ಸುಳ್ಯ ತಾಲೂಕಿನ ಅದೊಂದು ಪುಟ್ಟ ಗ್ರಾಮ. ಆ ಗ್ರಾಮಕ್ಕೆ ಸಂಬಂಧ ಪಟ್ಟ ಜೋಗಿಬೆಟ್ಟು ಎಂಬ ಸಣ್ಣ ಊರು. ಜೋಗಿಬೆಟ್ಟು ಮಂಞನಕಾನ ರಸ್ತೆಯು ನಡೆದುಕೊಂಡು ಹೋಗಲಾರದಷ್ಟು ಹದೆಗಟ್ಟಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ಜನರ ಓಡಾಟ ನಡೆಸುತ್ತಿದ್ದು ಶಾಲಾ ಮಕ್ಕಳಂತು ಪರದಾಟ ನಡೆಸುತ್ತಿದ್ದಾರೆ.
ಈ ರಸ್ತೆಯು ಮಳೆಗಾಲದಲ್ಲಿ ಪ್ರತಿ ವರ್ಷವೂ ಹದೆಗೆಡುವುದನ್ನು ರೂಢಿಯಾಗಿಸಿಕೊಂಡಿದೆ. ಈ ವರ್ಷವೂ ಪುನರಾವರ್ತನೆಯಾಗಿದ್ದು ಮತ್ತೆ ಇಲ್ಲಿನ ಜನರೆ ರಸ್ತೆಯನ್ನು ಸರಿಪಡಿಸಬೇಕಾದ ದುಸ್ಥಿತಿ ಬಂದಿದೆ. ಅತ್ಯಂತ ಹಳೆಯ ಕಾಲದ ರಸ್ತೆಯಾಗಿರುವ ಜೋಗಿಬೆಟ್ಟು ಮಂಞನಕಾನ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ . ಮಳೆಗಾಲದ ನೀರು ಮಧ್ಯ ಮಾರ್ಗದಲ್ಲಿಯೇ ಹರಿದುಹೋಗುತ್ತದೆ. ಈ ರಸ್ತೆಯು ನೂರಾರು ಮನೆಗಳಿಗೆ ಸಂಪರ್ಕವನ್ನು ನೀಡುತ್ತದೆ . ಈ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ಹಲವಾರು ವಿದ್ಯಾರ್ಥಿಗಳು ನಡೆದು ಕೊಂಡು ಹೋಗಬೇಕು. ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಡೆದುಕೊಂಡು ಹೋಗಲಾರದಷ್ಟು ಹದೆಗೆಟ್ಟಿರುವುದು ಮಾತ್ರ ಬೇಸರದ ಸಂಗತಿ. ದೊಡ್ಡ ದೊಡ್ಡ ಹೊಂಡ ಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ನುಂಗಾಲಾದ ತುತ್ತಾಗಿದೆ. ಯಾವ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಿರುಗಿ ನೋಡದ ಇಂತಹ ಮನಕರಗುವಂತಹ ದುಸ್ಥಿತಿಯನ್ನು ಕಂಡು ಇಲ್ಲಿನ ಉತ್ತಾಹಿ ಯುವಕರು ಈ ರಸ್ತೆಯನ್ನು ಕೆಲವೆ ಗಂಟೆಗಳಲ್ಲಿ ಸರಿಪಡಿಸಿ ಮೆಚ್ಚುಗೆಗೆ ಪಾತ್ತರಾಗಿದ್ದಾರೆ. ಹದೆಗೆಟ್ಟ ರಸ್ತೆಗೆ ಕಲ್ಲು , ಜಲ್ಲಿ ಹಾಸಿ ತಾತ್ಕಾಲಿಕವಾಗಿ ಸರಿಪಡಿಸಿ ರಸ್ತೆಗೆ ಜೀವ ತುಂಬಿದ್ದಾರೆ . ಈ ಯುವಕರ ಉತ್ಸಾಹ ಕೆಲಸದಿಂದಾಗಿ ಈ ಭಾಗದ ಜನರು ಇಂದು ಸುಗಮವಾಗಿ ವಾಹನ ಚಾಲನೆ ಮಾಡಲು, ನಡೆದಾಡಲು ಆಗುವಂತಾಗಿದ್ದು ಸತ್ಯ. ಈ ಕೆಲಸದಲ್ಲಿ ಶ್ರೀನಿವಾಸ ಭಟ್ ಜೋಗಿಬೆಟ್ಟು, ವಿನೋದ್ ಮಾಳಪ್ಪಮಕ್ಕಿ, ಮಹೇಶ್ ಜೋಗಿಬೆಟ್ಟು, ಉಮೇಶ್ ಜೋಗಿಬೆಟ್ಟು, ವಾಡ್ಯಪ್ಪ ಗೌಡ ಜೋಗಿಬೆಟ್ಟು, ವಿಜಯ್ ಕಾಚಿಲ, ಉಮೇಶ್ ಭಾಗವಹಿಸಿದ್ದರು .