Ad Widget

ಸಂಪಾಜೆ : ಮೂಲಭೂತ ಸೌಕರ್ಯಕ್ಕೆ ಪ್ಲಾಟಿಂಗ್ ಸಮಸ್ಯೆ ಅಡಚಣೆಯಾಗಿದ್ದು ಶೀಘ್ರ ಇತ್ಯರ್ಥಕ್ಕೆ ಹಿತರಕ್ಷಣಾ ವೇದಿಕೆ ಒತ್ತಾಯ

. . . . .

ಸಂಪಾಜೆ ಮೂಲ‌ ಭೂತ ಸೌಕರ್ಯ, ಪ್ಲಾಟಿಂಗ್, ಕನ್ವರ್ಷನ್, ನೈನ್ ಲೆವೆನ್, ಸಾವರ್ಜನಿಕ ಸ್ಮಶಾನ , ಅಡಿಕೆ ಹಳದಿ ರೋಗ, ಕೃಷಿ ಕೂಲಿ ಕಾರ್ಮಿಕ ಸಮಸ್ಯೆಗೆಗಳು ಕಣ್ಣಿಗೆ ಕಂಡರೂ ಇಲಾಖಾಧಿಕಾರಿಗಳು ಸ್ಪಂದನೆ ನೀಡುವುದಿಲ್ಲ ಎಂದು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಕೆ.ಪಿ .ಜಾನಿ ಹೇಳಿದರು.

ಅವರು ಆ.7 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಮೀನುಗಳ ದಾಖಲೆಗಳಿಗೆ ಸಂಬಂದಿಸಿದ ಕನ್ವರ್ಷನ್, ಪ್ಲಾಟಿಂಗ್, ನೈನ್ ಲೆವೆನ್, 91ಸಿ ಹಕ್ಕುಪತ್ರ ಮತ್ತು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ಬಗೆಗಿನ ಸಮಸ್ಯೆಗಳು, ಸಂಪಾಜೆಯಲ್ಲಿ ಸಾರ್ವಜನಿಕ ಸ್ಮಶಾನದ ಇಲ್ಲದಿರುವುದು, ಅಡಿಕೆ ಹಳದಿರೋಗದಿಂದ ಸಮಸ್ಯೆಗೀಡಾದ ರೈತ, ಕೃಷಿಕೂಲಿ ಕಾರ್ಮಿಕರ ಸಮಸ್ಯೆ, ಕೆ.ಎಫ್.ಡಿ.ಸಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ನಿವೃತ್ತಿ ನಂತರದ ವಾಸಕ್ಕಾಗಿ ನಿವೇಶನ ಒದಗಿಸುವುದು ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಗ್ರಾಮ ಮಟ್ಟದಿಂದ ರಾಜ್ಯಮಟ್ಟದ ವರೆಗಿನ ಸಂಬಂದಪಟ್ಟ ಎಲ್ಲಾ ಅಧಿಕಾರಿಗಳನ್ನು ಮತ್ತು ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‌ ರವರುಗಳಿಗೆ ಈಗಾಗಲೇ ಮನವಿಗಳನ್ನು ಕೊಡಲಾಗಿದೆ. ಎಲ್ಲಾ ಅಧಿಕಾರಿಗಳೂ ಸಚಿವರುಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು ಜಮೀನಿನ ದಾಖಲೆಗಳ ಅವ್ಯವಸ್ಥೆಗೆ ಸಂಬಂದಿಸಿ ಹೆಚ್ಚಿನ ಸಮಸ್ಯೆಗಳಿಗೆ ಕಾರಣ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮ್ಮುಖದಲ್ಲಿ ಗಡಿ ಗುರುತು ಆಗದಿರುವುದೇ ಆಗಿದೆ ಎಂದು ದೂರಿದರು, ಆದುದರಿಂದ ಆದಷ್ಟು ಬೇಗ ಅರಣ್ಯ ಮತ್ತು ಕಂದಾಯ ಇಲಾಖೆಗೆ ತಿಳಿಸುತ್ತೇವೆ, ಇಲ್ಲದಿದ್ದರೇ ಮುಂದಿನ ದಿನದಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು ಕೆ ಪಿ ಜಾನಿ ಹೇಳಿದರು.

ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಸಂಪಾಜೆ ಸಂಯೋಜಕ ಸೋಮಶೇಖರ ಕೊಯಿಂಗಾಜೆ ಮಾತನಾಡಿ ಸಂಪಾಜೆ ಕೆನರಾ ಬ್ಯಾಂಕ್ ನಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದೂರು ಸಲ್ಲಿಸಿದರ ಪರಿಣಮವಾಗಿ ಸಂಭಂದಪಟ್ಟ ಮೇಲಧಿಕಾರಿಗಳು ಬಂದು ವೇದಿಕೆಯ ಪ್ರಮುಖರನ್ನು ಕರೆಸಿ ಸಭೆ ನಡೆಸಿ ಆಗಿರೋ ಅನ್ಯಾಯಗಳನ್ನು ಮರುಕಳಿಸದಂತೆ ನೋಡುತ್ತೇವೆ ಎನ್ನುವ ಭರವಸೆ ಕೊಟ್ಟಿರುತ್ತಾರೆ. ಹಾಗೇಯೇ ತಾಲೂಕು ಮಟ್ಟದಲ್ಲಿ ಪೆಂಡಿಂಗ್ ಇರುವ ಪಡಿತರ ಚೀಟಿ ಬಿಡುಗಡೆ ಮಾಡಬೇಕೆಂದು ಕೋರಿ ಸರಕಾರದ ಗ್ಯಾರೆಂಟಿ ಯೋಜನೆಗಳಿಂದ ಬಡಪಾಯಿಗಳು ವಂಚಿತರಾಗುತ್ತಿರುವ ಬಗ್ಗೆ ಸಚಿವರಾದ ಕೆ.ಹೆಚ್‌ ಮುನಿಯಪ್ಪ ಇವರಲ್ಲಿ ಮಾತನಾಡಿ ಮನವಿ ಸಲ್ಲಿಸಿದ ಕೂಡಲೇ, ಉಳಿಕೆಯಾಗಿರುವ ಮತ್ತು ಹೊಸ ಪಡಿತರ ವಿತರಿಸುವ ಬಗ್ಗೆ ಪತ್ರಿಕಾ ಹೇಳಿಕೆ ಕೂಡಾ ನೀಡಿದ್ದಾರೆ ಎಂದು ಹೇಳಿದರು. ಎಜ್ಯುಕೇಷನ್ ಲೋನ್ ನಿಂದ ಬಡ ವಿದ್ಯಾರ್ಥಿಗಳನ್ನು ದೂರವಿಟ್ಟಿರೋ ಬಗ್ಗೆ ಹಾಗೆ ಆಗಿದೆ. ಆರ್ ಟಿ ಸಿ ಇಲ್ಲದಿದ್ದರೇ ಲೋನ್ ಕೊಡುತ್ತಿಲ್ಲ. ಕೇಂದ್ರ ಸರಕಾರದ ಮಟ್ಟದಲ್ಲಿ ಆಗಿರುವ ಕಾನೂನು ಆಗಿರುವ ಕಾರಣ ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು.

ಗೋಷ್ಠಿಯಲ್ಲಿ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಯು. ಬಿ ಚಕ್ರಪಾಣಿ, ,ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಸದಸ್ಯರಾದ ,ಇಬ್ರಾಹಿಂ , ಮಹಮ್ಮದ್ ಕುoಞಿ , ಲೂಕಾಸ್, ಶೌವಾದ್, ಜಿತೇಶ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!