ನಮ್ಮ ಹೋರಾಟ ಯಾವುದೇ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ದವಲ್ಲ ನ್ಯಾಯಕ್ಕಾಗಿ ಹೋರಾಟ , ಸೌಜನ್ಯ ಎಂಬ ಹೆಣ್ಣು ಮಗಳು ನಮ್ಮ ಸಹೋದರಿ ಅವಳಿಗೆ ನ್ಯಾಯ ಸಿಗಬೇಕು ಎಂದು ಟಿ ಎನ್ ವಸಂತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು ಅವರು ಅ.5ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡುತ್ತಾ ಸೌಜನ್ಯಳ ಹತ್ಯೆ ನಡೆದು ಸುಮಾರು 11 ವರ್ಷ ಕಳೆಯಿತು. 11 ವರ್ಷದಲ್ಲಿ ನಿರಪರಾಧಿಯಾದ ಮುಗ್ಧನ ಬಂಧನ ಮಾಡಿ ಸೆರೆಯಲ್ಲಿ ಇರಿಸುವುದರ ಮುಖಾಂತರ ನ್ಯಾಯದ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ. ನಂಬಿಕೆ ಇಟ್ಟಿರುವ ಮೊಲೀಸ್ ಇಲಾಖೆ ಮತ್ತು ವೈದ್ಯಕೀಯ ಇಲಾಖೆ ಇಂದು ಸೌಜನ್ಯನ ನ್ಯಾಯ ಎನ್ನುವುದು ಮರೀಚಿಕೆಯಾಗುವಂತ ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕ ಬಂಧುಗಳು ಎಚ್ಚೆತ್ತು ಹೋರಾಟಕ್ಕೆ ಮುಂದಿರುವ ಕಾರಣದಿಂದ ನಾವುಗಳು ಒಂದಾಗಿ ‘ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತ ಸೌಜನ್ಯಪರ ಹೋರಾಟಕ್ಕೆ ಮುಂದಾಗಿದ್ದೇವೆ. ಹಲವಾರು ಸಂಘ ಸಂಸ್ಥೆ ಸಹಯೋಗದೊಂದಿಗೆ ಯಾವುದೇ ಧಾರ್ಮಿಕ ಕ್ಷೇತ್ರವನ್ನಾಗಲೀ, ವ್ಯಕ್ತಿಯನ್ನಾಗಲೀ ಕೇಂದ್ರೀಕರಿಸಿ ಮಾಡುವ ಹೋರಾಟ ಇದಲ್ಲ, ಇದು ಸೌಜನ್ಯಳ ಆತ್ಮ ಶಾಂತಿಪರ ಹೋರಾಟ. ಇದು ಸೌಜನ್ಯ ತಾಯಿಯ ಮನಸ್ಸಿನ ರೋದನಕ್ಕೆ ನಾವು ದೊರಕಿಸುವ ನ್ಯಾಯದ ಸಮಾಧಾನ, ಇಂತಹ ನ್ಯಾಯಾಂಗದ ವ್ಯವಸ್ಥೆ ಮತ್ತು ಸಮಾಜ ಹೀಗೆಯೇ ಮುಂದುವರಿದರೆ ನಮ್ಮ ದೇಶದೊಳಗೆ ದೇಶ ದ್ರೋಹಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರು. ದಿನಾಂಕ 8/08/23ರಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯರ ತಾಯಿಯನ್ನು ಸೇರಿಸಿಕೊಂಡು 9.00 ಗಂಟೆಗೆ ಮುರುಳ್ಯ ಗ್ರಾಮದ ನಿಂತಿಕಲ್ಲು ಮುಖ್ಯ ಪೇಟೆಯಿಂದ ವಾಹನ ಜಾಥಕ್ಕೆ ಚಾಲನೆ ಕೊಡುವುದರ ಮುಖಾಂತರ ಹೊರಟು ಸರಿ ಸುಮಾರು 500 ಕ್ಕೂ ಮಿಗಿಲಾದ ಬೈಕು ಕಾರುಗಳಲ್ಲಿ ವಾಹನ ಜಾಥದೊಂದಿಗೆ ಹೊರಟು ಸುಳ್ಯದ ಪೈಚಾರಿನಿಂದ ಕಾಲ್ನಡಿಗೆಯ ಜಾಥದ ಮುಖಾಂತರ ಸುಳ್ಯ ಪೇಟೆಗೆ ಸುಮಾರು 3000 ಕ್ಕೂ ಮಿಗಿಲಾದ ನ್ಯಾಯಪರ ಹೋರಾಟಗಾರರನ್ನು ಪ್ರದೇಶದಲ್ಲಿ ಸೇರುವ ಯೋಜನೆ ಮತ್ತು ಒಡಗೂಡಿಸಿಕೊಂಡು ಹಳೆ ಬಸ್ ನಿಲ್ದಾಣದಲ್ಲಿ ಸಭೆಯನ್ನು ಉದ್ದೇಶಿಸಿ ಮುಖ್ಯ ಭಾಷಣವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಲಿದ್ದಾರೆ ಅಲ್ಲದೆ ಸೌಜನ್ಯಳ ಕುಟುಂಬವು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಸೌಜನ್ಯ ಪರ ಹೋರಾಟದ ಸಂಚಾಲಕರಾದ ಎನ್ ಟಿ ವಸಂತ ತಿಳಿಸಿದರು. ಸೌಜನ್ಯ ನನ್ನ ನಾಲ್ಕನೇ ಮಗಳು ಅವಳಿಗೆ ನ್ಯಾಯ ಸಿಗಬೇಕು ಸರಸ್ವತಿ ಕಾಮತ್ . ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಕೆಲವೊಂದು ಚಿತ್ರಗಳು ಕಂಡಾಗ ಮತ್ತು ಸೌಜನ್ಯಳ ತಾಯಿ ತನ್ನ ಮಗಳಿಗಾಗಿ ಪರಿತಪಿಸುತ್ತಾ ಇರುವುದು ಕಂಡಾಗ ನನಗೆ ಬಹಳ ಭಯವಾಗುತ್ತಿದೆ ನನ್ನ ಮಕ್ಕಳು ಹೊರಗೆ ಇದ್ದಾರೆ ಒಂದು ಗ್ರಾಮದಲ್ಲೆ ಇಂತಹ ಘಟನೆ ನಡೆದು ಅದನ್ನೆ ಹಿಡಿಯಲು ಆಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು . ಮೊದಲಿಗೆ ಈ ತನಿಖೆಯನ್ನು ಅಂದಿನ ತನಿಖಾಧಿಕಾರಿಯಿಂದಲೇ ತನಿಖೆ ಆಗಬೇಕು ಅಲ್ಲದೆ ಎಸ್ ಐ ಟಿ ರಚಿಸಿ ಅದರ ಮುಖೇನ ತನಿಖೆ ಆಗಲಿ ಎಂದು ಹೇಳಿದರು ಈ ಸಂದರ್ಭದಲ್ಲಿ ಲೋಲಜಾಕ್ಷ ಬೂತಕಲ್ಲು , ಹರೀಶ್ ಕುಮಾರ್ , ವಿಶ್ವನಾಥ , ಜಯಲಕ್ಷ್ಮಿ , ಭರತ್ , ಅಜಿತ್ ಐವರ್ನಾಡು ಮತ್ತಿತರರು ಉಪಸ್ಥಿತರಿದ್ದರು
- Friday
- November 1st, 2024