Ad Widget

ತೊಡಿಕಾನ ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ

ಸುಳ್ಯ ತಾಲೂಕಿನಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ದಿನ ನಿತ್ಯ ಸಾವಿರಾರು ಭಕ್ತಾದಿಗಳು ಬಂದು ಹೋಗುತ್ತಿದ್ದು ಮಾತ್ರವಲ್ಲದೆ ತೊಡಿಕಾನ ಭಾಗದ ಸಾರ್ವಜನಿಕರಿಗೆ , ವಿದ್ಯಾರ್ಥಿಗಳಿಗೆ ಸಂಚರಿಸಲು ವಾಹನದ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ತೊಡಿಕಾನ ಭಾಗದ ಜನತೆ ಆ ಭಾಗದ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ ಇವರಲ್ಲಿ ಮನವಿ ಮಾಡಿದ್ದರು.

. . . . .

ಈ ಬಗ್ಗೆ ಗ್ರಾ.ಪಂ.ಸದಸ್ಯರು ಸಂಬಂಧಿಸಿದ ಸಚಿವರಿಗೆ, ಸುಳ್ಯದ ಡಿಪೋ ಮೆನೇಜರ್ ರವರಿಗೆ ಕೆ ಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಒದಗಿಸಿಕೊಡಿವಂತೆ ಮನವಿಯನ್ನು ಸಲ್ಲಿಸಿರುತ್ತಾರೆ. ಇವರ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ತೊಡಿಕಾನ ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಒದಗಿಸುವ ಭರವಸೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ, ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ, ತಿಮ್ಮಯ್ಯ ಮೆತ್ತಡ್ಕ, ಕೇಪು ದೊಡ್ಡಕುಮೇರಿ, ಕೇಶವ ಕೊಳಲುಮೂಳೆ, ಗಣೇಶ್ ನಾಯ್ಕ ಕಣಕ್ಕೂರು ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!