Ad Widget

ಸಂಪಾಜೆ: ಹೊಟೇಲ್‌ ಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಪೊಲೀಸ್ ಆಗಮಿಸುತ್ತಿದ್ದಂತೆ ಕಳ್ಳರು ಪರಾರಿ

. . . . . . .

ಇತ್ತೀಚೆಗೆ ಸುಳ್ಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ,ಇದೀಗ ಸುಳ್ಯ ತಾಲೂಕಿನ ಸಂಪಾಜೆಯಲ್ಲೂ ತಡರಾತ್ರಿ ಹೊಟೇಲ್‌ವೊಂದಕ್ಕೆ ಕಳ್ಳರು ನುಗ್ಗಿರುವ ಘಟನೆ ವರದಿಯಾಗಿದೆ.

ಸಂಪಾಜೆ ಚೆಕ್ ಪೋಸ್ಟ್ ಬಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಚೆಕ್ ಪೋಸ್ಟ್ ಬಳಿ ಇರುವ ಹೊಟೇಲ್ ಸ್ವಾಗತ್ ಗೆ ಕಳ್ಳರು ನುಗ್ಗಿ ಕೈಚಳಕ ತೋರಲು ಪ್ರಯತ್ನ ಪಟ್ಟಿದ್ದಾರೆ. ಹೊಟೇಲ್ ಮಾಲೀಕ ಚೆನ್ನಪ್ಪ ಅನಾರೋಗ್ಯದಿಂದ ಒಂದು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಾರು ಇಲ್ಲದ ಸಂದರ್ಭದಲ್ಲಿ ಹಿಂಬದಿ ಬಾಗಿಲಿನಿಂದ ಬೀಗ ಒಡೆದು ಕಳ್ಳರು ನುಗ್ಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವೇಳೆ ಶಬ್ದ ಕೇಳಿದ ಪಕ್ಕದ ಮನೆಯವರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕೂಡಲೇ ಕೊಡಗು-ಸಂಪಾಜೆ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಆದರೆ ಅವರು ಬರುವುದರೊಳಗೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!