ಪೆರುವಾಜೆ ಗ್ರಾಮ ಪಂಚಾಯತ್ ರಸ್ತೆ ಗೆ ಮಣ್ಣು ಹಾಕಿರುವ ದಾಮೋದರ ನಾಯ್ಕ ಅವರು ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ವಿರುದ್ಧ ನೀಡಿರುವ ದಲಿತ ನಿಂದನೆ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದುಬಂದಿದೆ.
ನನ್ನ ಬಗ್ಗೆ ಸುಳ್ಳು ಆರೋಪ ನೀಡಿರುವ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯ. ಅನಗತ್ಯವಾಗಿ ಕಿರುಕುಳ ನೀಡಿ, ವಾಟ್ಸ್ ಆ್ಯಪ್ ಮೂಲಕ ಮಾನಹಾನಿ ಮಾಡಿರುವುದು ಖಂಡನೀಯ, ನನ್ನ ಮೇಲೆ ಅಮಾನವೀಯ ವರ್ತನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ತಿರ್ಮಾನ ಮಾಡಿದ್ದೇನೆ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ಸಚಿನ್ ರಾಜ್ ಶೆಟ್ಟಿ ಪರವಾಗಿ ಹಿರಿಯ ನ್ಯಾಯವಾದಿ ಪಿ ಪಿ ಹೆಗ್ಡೆ ವಾದಿಸಿದ್ದರು.
- Thursday
- November 21st, 2024