Ad Widget

ಮಣಿಪುರ ಘಟನೆ ಖಂಡಿಸಿ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಸುಳ್ಯದಲ್ಲಿ ಮೌನ ಮೆರವಣಿಗೆ – ಪ್ರತಿಭಟನಾ ಸಭೆ

. . . . . . .

ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ಸುಳ್ಯ ತಾಲೂಕು ಸಮಿತಿಯ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಚರ್ಚ್‌ಗಳ ಹಾಗೂ ಸಂಘಟನೆಗಳ ಸಹಕಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಿತು.

ಸುಳ್ಯ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಸೂಚಕವಾಗಿ ಮೌನ ಮೆರವಣಿಗೆ ನಡೆಯಿತು. ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಧರ್ಮಗುರು ಫಾ.ಆದರ್ಶ್ ಜೋಸೆಫ್ ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ಪುನಃ ಸ್ಥಾಪನೆ ಆಗಬೇಕು. ಅಲ್ಲಿನ ಅಲ್ಪ ಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ ಕೊನೆಯಾಗಬೇಕು ಅಲ್ಲದೇ ವಿಶ್ವಗುರು ಭಾರತವನ್ನು ಮಾಡಲು ಪ್ರಧಾನಿ ಮಂತ್ರಿಗಳು ಹೇಳುತ್ತಿದ್ದರೆ ಇಲ್ಲಿ ನಡೆಯುತ್ತಿರುವುದೇನು ಸುಮಾರು ಎರಡು ತಿಂಗಳುಗಳಿಂದ ನಡೆಯುತ್ತಿದ್ದು ಪ್ರಧಾನಿ ಕೇವಲ ಮೂವತ್ತಾರು ಸೆಕುಂಡ್ ಈ ವಿಚಾರದ ಕುರಿತು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಸಾಮರಸ್ಯ ಉಳಿಯಬೇಕು ಅದಕ್ಕಾಗಿ ಈ ಹೋರಾಟ ಎಂದು ಹೇಳಿದರು.

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ ‘ ಮಣಿಪುರ ಘಟನೆ ಒಂದು ಷಡ್ಯಂತ್ರದ ಭಾಗ, ರಾಜಕೀಯ ಕಾರಣಕ್ಕಾಗಿ ಮಣಿಪುರದಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ನಡೆಯುತಿದೆ ಎಂದು ಹೇಳಿದರು.

ಸಿಐಟಿಯು ಮುಖಂಡ ಕೆ.ಪಿ.ಜಾನಿ ಕಲ್ಲುಗುಂಡಿ ಮಾತನಾಡಿ ಇದೊಂದು ವ್ಯವಸ್ಥಿತ ಷಡ್ಯಂತ್ರದ ಭಾಗ ಚರ್ಚ್ ಗಳ ನೆಲಸಮ ಮಾಡಲಾಗಿದೆ ಇದನ್ನು ನಾವು ಖಂಡಿಸುತ್ತೆವೆ ಎಂದು ಹೇಳಿದರು.

ಪ್ರತಿಭಟನ ಸಭೆಯಲ್ಲಿ ಧರ್ಮಗುರುಗಳಾದ ಫಾ.ವಿಕ್ಟರ್ ಡಿಸೋಜಾ, ಫಾ.ಕ್ರಿಸ್ಟಿ ಪುತಿಯಕುನ್ಹೇಲ್, ಕರ್ನಾಟಕ ಜೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ಬಿ ನೆಡುನಿಲಂ, ವಲಯ ಸಮಿತಿ ಅಧ್ಯಕ್ಷ ಬಿಜು ಅಗಸ್ಟಿನ್, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಜೋಸೆಫ್ ಎನ್.ವಿ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ,ಕೆ.ಎಸ್.ಉಮ್ಮರ್, ಮಾಜಿ ನಗರ ಪಂಚಾಯತ್ ಸದಸ್ಯೆ ಜೂಲಿಯಾ ಕ್ರಾಸ್ತ ,
ಪ್ರಮುಖರಾದ ಮಹಮ್ಮದ್ ಕುಂಞ ಗೂನಡ್ಕ, ವಿಲಿಯಂ ಲಸ್ರಾದೋ, ರೋಹನ್ ಪೀಠ‌, ವಿನೋದ್ ಲಸ್ರಾದೋ, ಎ.ಕೆ.ಇಬ್ರಾಹಿಂ, ರಿಚ್ಚಾರ್ಡ್ ಕ್ರಾಸ್ತಾ ವಸಂತ ಪೆಲ್ಲಡ್ಕ, ಇಬ್ರಾಹಿಂ ಕತ್ತರ್, ಎಸ್.ಕೆ.ಹನೀಫ್, ಲೂಕಾಸ್ ಟಿ.ಐ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!