Ad Widget

ಬಾಳಿಲದ ವಿದ್ಯಾಬೋಧಿನಿ ಎಜುಕೇಶನಲ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ರಾವ್ – ಕಾರ್ಯದರ್ಶಿಯಾಗಿ ಪಿಜಿಎಸ್‌ಎನ್ ಪ್ರಸಾದ್

ಬಾಳಿಲ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ 2022-2023 ನೆ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. 2023 -2026ನೇ ಸಾಲಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ರಾಧಾಕೃಷ್ಣ ರಾವ್ ಯು ಆಯ್ಕೆಯಾದರು. ಉಪಾಧ್ಯಕ್ಷರಾಗಿಎಂ ಸುಬ್ರಹ್ಮಣ್ಯ ಮುಂಡುಗಾರು, ಕಾರ್ಯದರ್ಶಿ,ಸಂಚಾಲಕರಾಗಿ ಪಿ ಜಿ ಎಸ್ ಎನ್ ಪ್ರಸಾದ್, ಉಪಕಾರ್ಯದರ್ಶಿಯಾಗಿ ಭಾರತೀ ಶಂಕರ ಆದಾಳ ಹಾಗೂ ಕೋಶಾಧಿಕಾರಿ ಕೈಂತಜೆ ರಾಮ ಭಟ್,ಸದಸ್ಯರಾಗಿ ಎನ್ ವೆಂಕಟ್ರಮಣ ಭಟ್, ಎನ್ ಕೃಷ್ಣ ಭಟ್ ಮತ್ತು ಡಾ ಶ್ರೇಯಸ್ ಭಾರದ್ವಾಜ ರವರು ಆಯ್ಕೆಯಾದರು. ಸ್ಥಾಪಕ ಸದಸ್ಯರಾದ ಗಣಪಯ್ಯ ಕಾಯಾರ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ನಿರ್ಗಮನ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿ, ಎಲ್ಲರ ಸಹಕಾರವನ್ನು ಸ್ಮರಿಸಿ ಮಾತನಾಡಿದರು. ಕಾರ್ಯದರ್ಶಿ ಪಿ ಜಿ ಎಸ್ ಎನ್ ಪ್ರಸಾದ್ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading