Ad Widget

ಸುಬ್ರಹ್ಮಣ್ಯ : ಕಾಲೇಜು ಹುಡುಗರ ಬೈಕ್ ಹುಚ್ಚಾಟಕ್ಕೆ ಪೊಲೀಸರಿಂದ ಬ್ರೇಕ್

ಸುಬ್ರಹ್ಮಣ್ಯದಲ್ಲಿ ಕಾಲೇಜ್ ಗೆ ಬರುವ ವಿದ್ಯಾರ್ಥಿಗಳು ತಮ್ಮ ಬೈಕ್ ಗಳಿಗೆ ಕರ್ಕಶ ದ್ವನಿ ಬರುವ ಸೈಲೆನ್ಸರ್ ಅಳವಡಿಸಿ ಕಾಲೇಜು ಬಿಡುವ ಸಮಯದಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳು ಸಂಚಾರಿಸುವ ಸಂದರ್ಭದಲ್ಲಿ ಅತೀ ವೇಗದಲ್ಲಿ ಸಂಚಾರಿಸುವುದನ್ನು ಕಂಡ ಸುಬ್ರಹ್ಮಣ್ಯ ಪೊಲೀಸರು ಜು.31 ರಂದು ಸೈಲೆನ್ಸರನ್ನು ಬಿಚ್ಚಿಸಿ ಹೊಸ ಸೈಲೆನ್ಸರ್ ಅಳವಡಿಸಿ ಕಳಿಸಿಕೊಟ್ಟ ಘಟನೆ ವರದಿಯಾಗಿದೆ. ಕಾಲೇಜೊಂದರ ಮುಂದೆ ಕೆಲವು ಯುವಕರು ಬೈಕ್ ಗೆ ಕರ್ಕಶ ಧ್ವನಿ ಬರುವ ಸೈಲೆನ್ಸರ್ ಅಳವಡಿಸಿ, ಅತಿ ವೇಗದಿಂದ ವನದುರ್ಗ ದೇವಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಬೈಕನ್ನು ತಡೆದು ನಿಲ್ಲಿಸಿ ಮೆಕಾನಿಕಲ್ ಬರ ಹೇಳಿ ಕರ್ಕಶ ಧ್ವನಿ ಬರುವ ಸೈಲೆನ್ಸರ್ ತೆಗೆಸಿ ದಂಡ ವಿಧಿಸಿ, ಹೊಸ ಸೈಲೆನ್ಸರನ್ನ ಅಳವಡಿಸಿ ಕಳಿಸಿಕೊಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಈ ತರದ ಹುಚ್ಚಾಟಗಳು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಚ್ಚರಿಕೆ ನೀಡಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading