ಸುಬ್ರಹ್ಮಣ್ಯದಲ್ಲಿ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ಸುಬ್ರಹ್ಮಣ್ಯ ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್, ಸುಳ್ಯದ ಕೆವಿಜಿ ಮೆಡಿಕಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜ್ ವತಿಯಿಂದ ಜುಲೈ 23 ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಜರಗಿತು. ಶಿಬಿರವನ್ನು ನಿವೃತ್ತ ಅಧ್ಯಾಪಕರಾದ ಸಿ ದೊಡ್ಡಣ್ಣಗೌಡ ,ಪುರೋಹಿತರಾದ ರಘುರಾಮ ಅಮ್ಮಣ್ಣಾಯ, ನಿವೃತ್ತ ರೈಲ್ವೆ ಅಧಿಕಾರಿ ರಾಘವ ಗೌಡ, ರಾವ್ ಟಿವಿ ಮುಖ್ಯಸ್ಥ ಸುರೇಶ್ ಜಾದವ್, ಹಾಗೂ ಡಾ lರವಿ ಕಕ್ಕೆ ಪದವು ದಂಪತಿಗಳು ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತ ಗುಂಡಡ್ಕ ,ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲ್, ಸೀನಿಯರ್ ಚೇಂಬರ್ ಅಧ್ಯಕ್ಷ ವಿಶ್ವನಾಥ ನಡು ತೋಟ , ಸುಬ್ರಹ್ಮಣ್ಯ ಹೈನಿಕಿದು ಸೊಸೈಟಿ ಪೂರ್ವ ಅಧ್ಯಕ್ಷ ರವೀಂದ್ರ ಕುಮಾರ್ ,ರುದ್ರಪಾದ, ಸೇವಾ ಟ್ರಸ್ಟ್ ನ ಮೋಹನ್ದಾಸ್ ರೈ, ಕೆವಿಜಿ ಮೆಡಿಕಲ್ ಆಸ್ಪತ್ರೆ ವೈದ್ಯಧಿಕಾರಿ ಡಾ. ಪ್ರಜ್ವಲ್ ಡಾ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ರಘುರಾಮ ಅಮ್ಮಣ್ಣ ಅವರು ಅನಾರೋಗ್ಯ ಬರುವ ಮೊದಲೇ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಈಗಿನ ಪರಿಸ್ಥಿತಿಯಲ್ಲಿ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಜೀವನ ಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯದಲ್ಲಿ ಏರುಪೇರು ಕಾಣುವುದು ಸಹಜ ,ರೋಗ ಬರುವ ಮೊದಲೇ ಮುಂಜಾಗ್ರತ ಕ್ರಮವನ್ನು ಕೈಗೊಂಡು ಸ್ವಸ್ಥ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು . ಶಿಬಿರದಲ್ಲಿ 200ಕ್ಕೂ ಮಿಕ್ಕಿ ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಗೋಪಾಲಣ್ಣ ಸ್ವಾಗತಿಸಿದರು ಸೀನಿಯರ್ ಚೇಂಬರ್ ಅಧ್ಯಕ್ಷ ವಿಶ್ವನಾಥ ನಡು ತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಡಾl ರವಿ ಕಕ್ಕೆ ಪದವು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
- Friday
- November 1st, 2024