Ad Widget

ಸುಬ್ರಹ್ಮಣ್ಯ: ರೋಟರಿ ಕ್ಲಬ್ ವತಿಯಿಂದ ಸಾಧಕಿಗೆ ಸನ್ಮಾನ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶರೀನಾ ಡಿಸೋಜಾ ಇವರನ್ನು ಅವರ ಮನೆಯಲ್ಲಿ ಸೆ.15ರಂದು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯ ಕುಮಾರ ಅಮೈ, ಪೂರ್ವಾಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ಗಿರಿಧರ್ ಸ್ಕಂಧ, ವಿಶ್ವನಾಥ ನಡುತೋಟ ,ವೆಂಕಟೇಶ್ ಎಚ್ ಎಲ್ , ಸದಸ್ಯರಾದ ಗೋಪಾಲ್ ಎಣ್ಣೆಮಜಲು ,ರವಿ ಕಕ್ಕೆಪದವು, ರೋಹಿತ್ ಬಿ ಬಿ, ಚಂದ್ರಶೇಖರ ನಾಯರ್, ಲೋಕೇಶ ಎ ಜೊತೆಗೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿನಿಯ ಹೆತ್ತವರು ಉಪಸ್ಥಿತರಿದ್ದರು.

ವಿಶ್ವನಾಥ ನಡುತೋಟ ಸ್ವಾಗತಿಸಿ, ಗೋಪಾಲ್ ಎಣ್ಣೆಮಜಲು ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!