ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಳ್ಳಾರೆಯಲ್ಲಿ ಯಕ್ಷಗಾನ ಕಲಾವಿದರ ಸಂಸ್ಮರಣೆ – ಯಕ್ಷಗಾನ ಪ್ರದರ್ಶನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಯಕ್ಷ ಕಲಾಬೋಧಿನೀ ಬೆಳ್ಳಾರೆ ಆಶ್ರಯದಲ್ಲಿ ಯಕ್ಷಗಾನದ ಬಣ್ಣದ ವೇಷಧಾರಿಯಾಗಿದ್ದ ದಿ. ಸುಬ್ಬಣ್ಣ ರೈ ಮತ್ತು ಹಾಸ್ಯಕಲಾವಿದರಾಗಿದ್ದ ದಿ. ದಿವಾಕರ ಮಣಿಯಾಣಿಯವರ ಸಂಸ್ಮರಣೆ ಮತ್ತು ಯಕ್ಷಗಾನ ಬಯಲಾಟ ಕೋಟಿ ಚೆನ್ನಯ್ಯ ನ. 6ರಂದು ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

. . . . . . . . .

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್ ವಹಿಸಿದ್ದರು. ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಶಿ ಸಂಸ್ಮರಣೆ ಮಾಡಿದರು. ದ.ಕ. ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಕುಂಬ್ರ ದಯಾಕರ ಆಳ್ವ ಅತಿಥಿಯಾಗಿ ಭಾಗವಹಿಸಿದ್ದರು.

. . . . . . .

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ದೇವಸ್ಥಾನದ ಮಾತೃಮಂಡಳಿ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಚೂಂತಾರು, ಯಕ್ಷ ಕಲಾಬೋಧಿನೀ ಅಧ್ಯಕ್ಷ ಲೋಕೇಶ್ ತಂಟೆಪ್ಪಾಡಿ, ದಿ. ಸುಬ್ಬಣ್ಣ ರೈಯವರ ಪುತ್ರ ಗೋಪಾಲಕೃಷ್ಣ ರೈ ಕಳಂಜ, ದಿ. ದಿವಾಕರ ರೈಯವರ ಸಹೋದರ ಶಶಿಧರ ಮಣಿಯಾಣಿ ಬೀಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕು. ಕೇತನಾ ಗೌರಿಪುರಂ ಪ್ರಾರ್ಥಿಸಿದರು. ಯಕ್ಷ ಕಲಾಬೋಧಿನೀ ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ಜಯರಾಂ ಸ್ವಾಗತಿಸಿ, ಲೋಕೇಶ್ ತಂಟೆಪ್ಪಾಡಿ ವಂದಿಸಿದರು. ಯಕ್ಷ ಕಲಾಬೋಧಿನೀ ಬೆಳ್ಳಾರೆ ಇದರ ಸಂಚಾಲಕರು ಮತ್ತು ಕಾರ್ಯಕ್ರಮದ ಸಂಘಟಕರಾದ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಕೋಟಿ ಚೆನ್ನಯ್ಯ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading