Ad Widget

ಮಾವಿನಕಟ್ಟೆ : ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಸ್ತಿತ್ವಕ್ಕೆ – ಅಧ್ಯಕ್ಷ ಜಯಂತ ಮಾವಿನಕಟ್ಟೆ, ಕಾರ್ಯದರ್ಶಿ ಯತೀಂದ್ರ ಮಾವಿನಕಟ್ಟೆ

ಚಿರಾಯು ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ವಿಜಯಕಾಂತ್ ಮಾವಿನಕಟ್ಟೆ, ಅಧ್ಯಕ್ಷರಾಗಿ ಜಯಂತ ಮಾವಿನಕಟ್ಟೆ, ಉಪಾಧ್ಯಕ್ಷರಾಗಿ ಪ್ರವೀಣ್ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಯತೀಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ ಖಜಾಂಜಿಯಾಗಿ ಫಾರೂಕ್ ಮಾವಿನಕಟ್ಟೆ, ಗೌರವ ಸಲಹೆಗಾರರಾಗಿ ಸಿದ್ದಿಕ್ ಅಬುದಾಬಿ, ತೋಮಸ್ ದುಬೈ ಹಾಗೂ ಕವನ ಮಾವಿನಕಟ್ಟೆ , ಸಂಘಟನಾ...

ಸಂಘ ಧ್ಯೇಯ ಕಿರುಚಿತ್ರಕ್ಕೆ ಮುಹೂರ್ತ

ಎ.ಯು. ಕ್ರಿಯೇಶನ್ ನಿರ್ಮಾಣದ "ಸಂಘಧ್ಯೇಯ" ಎಂಬ ಕನ್ನಡ ಕಿರುಚಿತ್ರದ ಮುಹೂರ್ತವು ಉಪ್ಪಿನಂಗಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು. ಕಿರುಚಿತ್ರದ ನಾಯಕನಾಗಿ ನವನೀತಕೃಷ್ಣ ಜೋಗಿಯಡ್ಕರವರು ಬಣ್ಣ ಹಚ್ಚಲಿದ್ದು, ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ನಿರ್ದೇಶನವನ್ನು ಅಚಲ್ ಉಬರಡ್ಕ ಮಾಡಲಿದ್ದಾರೆ. ಈ ಕಿರುಚಿತ್ರದಲ್ಲಿ ಶ್ರೀವತ್ಸ ಭಾರಧ್ವಾಜ, ಕಿರಣ್ ಕುಮಾರ್ ಶಾಂತಿನಗರ ಮತ್ತಿತರರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಛಾಯಾಗ್ರಾಹಕರಾಗಿ ವಿನಯ್ ರೈ...
Ad Widget

ಸರಕಾರದ ನಡೆ ಖಂಡಿಸಿ ವಿ ಹೆಚ್ ಪಿ, ಬಜರಂಗದಳ ನಾಳೆ ಪ್ರತಿಭಟನೆ

ಮೈಸೂರಿನ ನಂಜನಗೂಡಿನಲ್ಲಿ ಪುರಾತನ ದೇವಸ್ಥಾನ ತೆರವುಗೊಳಿಸಿದ್ದನ್ನು ಹಾಗೂ ಇನ್ನೂ ಹಲವು ದೇವಸ್ಥಾನಗಳನ್ನು ಧ್ವಂಸಗೊಳಿಸಲು ನಿರ್ಧರಿಸಿರುವ ಸರಕಾರದ ನಡೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಖಂಡಿಸಿ ಸೆ.16 ರಂದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಿದೆ ಎಂದು ಬಜರಂಗದಳದ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ ತಿಳಿಸಿದ್ದಾರೆ.

ಅರಂತೋಡು : ಬಟ್ಟೆ ಒಗೆಯಲು ಹೋಗಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆ

ಬಟ್ಟೆ ಒಗೆಯಲೆಂದು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಉಳುವಾರಿನ ಮಹಿಳೆಯ ಮೃತದೇಹ ಪೆರಾಜೆ ಸಮೀಪ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.ಅರಂತೋಡು ಗ್ರಾಮದ ಉಳುವಾರು ಸಣ್ಣಮನೆಯ ಮಾಧವರವರ ಪತ್ನಿ ಮೀನಾಕ್ಷಿಯವರು ಸೆ. 11ರಂದು ಸಂಜೆ 5 ಗಂಟೆ ಸುಮಾರಿಗೆ ಅರಂತೋಡಿನ ಮಾಡದ ಬಳಿ ಇರುವ ಹೊಳೆಗೆ ಬಟ್ಟೆ ಒಗೆಯಲೆಂದು ಹೋದವರು ನಾಪತ್ತೆಯಾಗಿದ್ದರು. ತೊಡಿಕಾನ ಅರಂತೋಡಿನ ಗ್ರಾಮಸ್ಥರು, ಅಗ್ನಿಶಾಮಕ ದಳ, ಪೈಚಾರಿನ...

ದೇವ : ಬೀದಿದೀಪ ಅಳವಡಿಸಲು ಗ್ರಾಮಸ್ಥರಿಂದ ಮನವಿ

ದೇವಚಳ್ಳ ಗ್ರಾ.ಪಂ.ವ್ಯಾಪ್ತಿಯ ದೇವ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಬಳಿ ಬೀದಿದೀಪ ಅಳವಡಿಸುವಂತೆ ನಾಗರಿಕರು ದೇವಚಳ್ಳ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಿಡಿಓ ಗುರುಪ್ರಸಾದ್, ಅಧ್ಯಕ್ಷೆ ಸುಲೋಚನ ದೇವ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ: ರೋಟರಿ ಕ್ಲಬ್ ವತಿಯಿಂದ ಸಾಧಕಿಗೆ ಸನ್ಮಾನ

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶರೀನಾ ಡಿಸೋಜಾ ಇವರನ್ನು ಅವರ ಮನೆಯಲ್ಲಿ ಸೆ.15ರಂದು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯ ಕುಮಾರ ಅಮೈ, ಪೂರ್ವಾಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ಗಿರಿಧರ್ ಸ್ಕಂಧ, ವಿಶ್ವನಾಥ ನಡುತೋಟ ,ವೆಂಕಟೇಶ್ ಎಚ್...

ಶತಾಯುಷಿ ಕುಂಜ್ಞಣ್ಣ ನಾಯ್ಕ್ ಕಡವೆಪಳ್ಳ ನಿಧನ

ನಾಲ್ಕೂರು ಗ್ರಾಮದ ಕಡವೆಪಳ್ಳ ದಿವಂಗತ ವಾಮನ ಮಾಸ್ತರ್ ಅವರ ತಂದೆ ಕುಂಜ್ಞಣ್ಣ ನಾಯ್ಕ್ ಅವರು ಸೆ.14 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 115 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ. (ವರದಿ :- ಉಲ್ಲಾಸ್ ಕಜ್ಜೋಡಿ)
error: Content is protected !!