- Thursday
- October 31st, 2024
ಸುಳ್ಯದ ಜ್ಯೋತಿ ವೃತ್ತದ ಬಳಿ ಸವಿತಾ ಜ್ಯುವೆಲ್ಲರಿ ವರ್ಕ್ ಸೆ.1 ರಂದು ಶುಭಾರಂಭಗೊಂಡಿದೆ. ಇಲ್ಲಿ ಎಲ್ಲಾ ಬಗೆಯ ಚಿನ್ನ ಬೆಳ್ಳಿಯ ಕೆಲಸಗಳನ್ನು ಮಾಡಿಕೊಡಲಾಗುವುದು. ಹಾಗೂ ಗ್ರಾಹಕರು ತಮಗೆ ಬೇಕಾದಂತೆ ಆಭರಣ, ಮೂರ್ತಿ ಹಾಗೂ ಇತರ ಸಾಮಗ್ರಿಗಳನ್ನು ತಯಾರಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.
ಸುಳ್ಯದ ಕುರುಂಜಿಭಾಗ್ ಕೆ.ವಿ.ಜಿ.ಸರ್ಕಲ್ ನಲ್ಲಿ ಶ್ರೀ ಮಹಾಲಕ್ಷ್ಮಿ ಜನರಲ್ ಸ್ಟೋರ್ ಶುಭಾರಂಭ ಸೆ.1ರಂದು ಶುಭಾರಂಭಗೊಂಡಿತು. ಎಲ್ಲಾ ಬಗೆಯ ಉತ್ತಮ ಗುಣಮಟ್ಟದ ಜಿನಸು ಸಾಮಾಗ್ರಿಗಳು ದೊರೆಯುತ್ತದೆ. ಸುಳ್ಯ ನಗರ 2 ಕಿ.ಮೀ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ ಲಭ್ಯವಿದೆ ಎಂದು ಮಾಲಕರಾದ ಸಂದೀಪ್ ತಿಳಿಸಿದ್ದಾರೆ.
ಮರ್ಕಂಜ ಗ್ರಾಮ ಪಂಚಾಯತ್ ನ ಪ್ತಭಾರ ಪಿಡಿಓ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.
ಮರ್ಕಂಜ ಗ್ರಾಮ ಪಂಚಾಯತ್ ನ ಪ್ರಭಾರ ಪಿಡಿಓ ಆಗಿ ರವಿಚಂದ್ರ ಎ ಅಧಿಕಾರ ಸ್ವೀಕರಿಸಿದರು. ಪಿಡಿಓ ಧನಪತಿಯವರು ಅಧಿಕಾರ ಹಸ್ತಾಂತರಿಸಿದರು.ಧನಪತಿಯವರು ಗುತ್ತಿಗಾರು ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದ್ದಾರೆ.
ಜೇಸಿಐ ಬೆಳ್ಳಾರೆ, ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ನಡೆಯುತ್ತಿರುವ 'ಕ್ಷಯ ಮುಕ್ತ ಭಾರತ' ಕಿರುಚಿತ್ರಕ್ಕೆ ಮುಹೂರ್ತ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಸೆ.1ರಂದು ನಡೆಯಿತು. ಕಿರುಚಿತ್ರದ ಮುಹೂರ್ತವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜೇಸಿ ರಾಜೀವಿ.ಆರ್ ರೈ ನೆರವೇರಸಿ ಕಿರುಚಿತ್ರಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ...