ಯೇನೆಕಲ್ಲು ಗ್ರಾಮದ ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ರಸ್ತೆಗೆ ಸುಬ್ರಹ್ಮಣ್ಯ ಕ್ಷೇತ್ರದ ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆಯವರ ರೂ 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ರಸ್ತೆಯನ್ನು ತಾ. ಪಂ. ಸದಸ್ಯ ಅಶೋಕ್ ನೆಕ್ರಾಜೆ ಇಂದು ಉದ್ಘಾಟಿಸಿದರು.
ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ವೆಂಕಟೇಶ್ವರ ಭಟ್ ಗೊರಸಿನಮನೆ, ಏನೆಕಲ್ಲು ಪ್ರಾ.ಕೃ. ಪ.ಸ. ಸಂಘದ ನಿರ್ದೇಶಕ ವೆಂಕಟ್ರಮಣ ಕೇಂಬ್ರೋಳಿ, ಮಾಜಿ ನಿರ್ದೇಶಕ ಗಿರೀಶ್ ಪದ್ಮಡ್ಕ, ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ರಾಮಯ್ಯ ಎಂ.ಎಂ, ಶರತ್ ಚಂದ್ರ ತೇರಿನಮಜಲು, ಯೇನೆಕಲ್ಲು ದೈವಸ್ಥಾನದ ಸೇವಾಕರ್ತೃ ರಾಧಾಕೃಷ್ಣ ಪೂಜಾರಿಮನೆ, ಪ್ರಗತಿಪರ ಕೃಷಿಕ ಪಿ.ಎಸ್. ಕಾರ್ಯಪ್ಪ ಗೌಡ ಪುಂಡಿಗದ್ದೆ, ಏನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ನೆಕ್ರಾಜೆ, ಸುಬ್ರಹ್ಮಣ್ಯ ಗ್ರಾ. ಪಂ. ಕಾರ್ಯದರ್ಶಿ ಬಿ. ಮೋನಪ್ಪ ಕುಸುಮಾಧರ ಗುಡ್ಡೆಮನೆ, ತಾರಾನಾಥ, ಜಗದೀಶ್, ಮಹಾಬಲ ಗುಡ್ಡೆಮನೆ, ನಾಗರಾಜ ನೆಕ್ರಾಜೆ, ಶಿವಚರನ್, ನಿವೃತ್ತ ಯೋಧ ಸುಬೇದಾರ್ ವಾಸುದೇವ ಬಾನಡ್ಕ, ಜಗದೀಶ ಗುಡ್ಡೆಮನೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.